ಮುಸ್ಲಿಮರ ಮೇಲಿನ ಅಟ್ರಾಸಿಟಿ ಪ್ರಕರಣ ಪರಿಶೀಲನೆಗೆ ಮುಸ್ಲಿಂ ಮುಖಂಡರ ಮನವಿ


ಸಕಲೇಶಪುರ: ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿ ಮುಸ್ಲಿಮರ ಮೇಲೆ ದಾಖಲಾಗಿರುವ ದಲಿತ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಚಾರ್ಚ್ ಶೀಟ್ ನಲ್ಲಿ ಅಮಾಯಕರ ಹೆಸರು ಕೈ ಬಿಡುವಂತೆ ಮುಸ್ಲಿಂ ಮುಖಂಡರು ಪೋಲೀಸ್ ಅಧಿಕಾರಿಗಳಿಗೆ ಬೇಟಿಮಾಡಿ ಮನವಿಮಾಡಿದರು.
ಡಿ ವೈ ಎಸ್ ಪಿ ಗೋಪಿ, ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್, ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಗವೇಂದ್ರ ರವರನ್ನು ಬೇಟಿಮಾಡಿದ ಮುಸ್ಲಿಂ ಮುಖಂಡರು. ಅಟ್ರಾಸಿಟಿ ಪ್ರಕರಣಗಳು ದಾಖಲಿಸುವ ಮೊದಲು ದಯವಿಟ್ಟು ಪರಿಶೀಲಿಸಿ ಎಂದು ವಿನಂತಿಸಿದರು.
ಮುಸ್ಲಿಂ ಮುಖಂಡರ ಮನವಿಯನ್ನು ಆಲಿಸಿದ ಪೋಲಿಸ್ ಇಲಾಖೆಯ ಅಧಿಕಾರಿಗಳು  ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಾಮೀಯ ಮತ್ತು ಲಬಾಬಿನ್ ಮಸೀದಿ ಅಧ್ಯಕ್ಷ ನಜೀಬ್ ಅಕ್ರಂ ರವರು, ತಾಲ್ಲೂಕಿನಲ್ಲಿ ದಲಿತ ಮತ್ತು ಮುಸ್ಲಿಂ ಸಂಬಂದ ಉತ್ತಮವಾಗಿದೆ. ಕೆಲವು ದುಷ್ಟ ಶಕ್ತಿಗಳು ಇದನ್ನು ಹಾಳು ಮಾಡಲು ಅಟ್ರಾಸಿಟಿ ಕಾಯ್ದಿ ಅಸ್ತವಾಗಿ ಬಳಸುತ್ತಿದ್ದಾರೆ ಈ ಬಗ್ಗೆ ಪೋಲಿಸ್ ಅಧಿಕಾರಿಗಳ ಜೊತೆ ಮಾತನಾಡಿ ಇಂಥಹ ದೂರುಗಳು ಬಂದಾಗ ಗಂಬೀರವಾಗಿ ಪರಿಶೀಲನೆ ಮಾಡುವಂತೆ ಮನವಿ ಮಾಡಲಾಯಿತು ಎಂದರು.
ಹಲಸುಲಿಗೆ ಗ್ರಾಮದ 10 ಮುಸ್ಲಿಂ  ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಜ್ ಮೇಲಿನ ಪ್ರಕರಣಗಳು ಸಂಪೂರ್ಣ ಸುಳ್ಳು ದೂರುಗಳಾಗಿವೆ ಎಂದರು.
ಅಟ್ರಾಸಿಟಿ ಕಾಯಿದೆ ಒಂದು ಅತ್ಯುತ್ತಮ ಕಾನೂನಾಗಿದೆ. ಈ ಕಾಯ್ದೆಯನ್ನು ಆತ್ಮಪೂರಕವಾಗಿ ಗೌರವಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ ಕಾನೂನು ಬಳಕೆಯಲ್ಲಿ   ವೆತ್ಯಾಸವಾಗ ಬಹುದು ಈ ಕಾರಣಕ್ಕಾಗಿ ನಾವು ಕಾಯ್ದೆ ಯನ್ನು ದೋಶಿಸಲು ಸಾದ್ಯವಿಲ್ಲ ಎಂದರು.
ಸೌಹಾರ್ದತೆಯ ಸಂತ ಖ್ಯಾತಿಯ ಇಬ್ರಾಹಿಂ ಕೆ ಮುಸ್ಲಿಯಾರ್ ಸುದ್ದಿ ಗಾರರೊಂದಿಗೆ ಮಾತನಾಡಿ,
ತಾಲ್ಲೂಕಿನಲ್ಲಿ ಮಾತ್ರವಲ್ಲ ದೇಶದಲ್ಲೇ ದಲಿತರ ಮತ್ತು ಮುಸ್ಲಿಂ ಬಾಂಧವ್ಯ ಉತ್ತಮವಾಗಿದೆ.  ಯಾವುದೇ ಶಕ್ತಿ-ಯುಕ್ತಿ ಇದನ್ನು  ಅಭದ್ರ ಗೊಳಿಸಲು ಸಾದ್ಯವಿಲ್ಲ. ಇದಕ್ಜೆ ಅವಕಾಶವನ್ನು ನೀಡುವುದಿಲ್ಲ ಎಂದರು.
ಇಲ್ಲಿಯ ಮುಸ್ಲಿಂ ಬಾಂದವರು ಸೌಹಾರ್ದ ಪ್ರೇಮಿಗಳು ಸಮಾಜದಲ್ಲ ಕೋಮು ಕಿಡಿ ಹತ್ತಿಸಲು ಎಷ್ಟೇ ಪ್ರಯತ್ನಿಸಿದರು ಅದು ಸಫಲವಾಗಿಲ್ಲ ಕಾರಣ ಇಲ್ಲಿಯ ಸೌಹಾರ್ದ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಯಾರು ಎಷ್ಟು ಪ್ರಯತ್ನ ಪಟ್ಟರು  ಆತ್ಮಿಯತೆಯ ಸುವ್ವಾಸನೆ ತಡೆಯಲು ಸಾದ್ಯವಿಲ್ಲ. ಮುಸ್ಲಿಂ ಬಾಂದವರ ವಿರುದ್ದ ಸುಳ್ಳು ದೂರು ನೀಡಿ ಅಟ್ರಾಸಿಟಿ ಕಾಯ್ದಿಯ ಕುತಂತ್ರದಿಂದ ಒಡದು ಆಳುವ ನೀತಿ ಪ್ರಯೋಗ ಸಪಲವಾಗದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಔಕಾಫ್ ಉಪಾಧ್ಯಕ್ಷ ಹಸೆನಾರ್ ಆನೆಮಹಲ್, ಜಾಮೀಯ ಮಸೀದಿ ಕಾರ್ಯದರ್ಶಿ ಮಹಮ್ಮದ್ ಫೈಜಾನ್, ಸದಸ್ಯ ಅಂಜದ್, ಮಂಜ್ರಬಾದ್ ದರ್ಗಾ ಸಮಿತಿ ಅಧ್ಯಕ್ಷ ಮಲ್ನಾಡ್ ಮೆಹಬೂಬ್, ಹುದಾ ಮಸೀದಿ ಅಧ್ಯಕ್ಷ ಮಜೀದ್ ಖಾನ್, ಬಿಲಾಲ್ ಮಸೀದಿ ಅಧ್ಯಕ್ಷ ಕಲೀಲ್ ಮಿಲಾಫ್, ಪುರಸಭೆ ಸದಸ್ಯ ಸಮೀರ್ ಖಾನ್, ಇಸ್ರಾರ್ ಅಹಮದ್, ಕೊಲ್ಲಹಳ್ಳಿ ಮಸೀದಿ ಅಧ್ಯಕ್ಷ ಸಲೀಂ ಅಬ್ದುಲ್ಲಾ, ವೀರ ಕನ್ನಡಿಗರ ಟಿಪ್ಪು ಸೇನೆ ಅಧ್ಯಕ್ಷ ಜಾಕೀರ್, ಕುಡುಗರ ಹಳ್ಳಿ ಮಸೀದಿ ಸದಸ್ಯ ಹಾರೀಸ್ ಮೈದು, ಬದ್ರಿಯಾ ಮಸೀದಿ ಸದಸ್ಯ ಲತೀಫ್, ಆನೆಮಹಾಲ್ ಮಸೀದಿ ಸಮಿತಿ ಸದಸ್ಯ ಅಬ್ಬು, ಹನೀಫ್, ಹಲಸುಲಿಗೆ ಮಸೀದಿ ಸದಸ್ಯರಾದ ಹೈದರ್, ಮಹಮ್ಮದ್, ಸುನ್ನಿ ಸಮಿತಿ ಸದಸ್ಯ ಬಶೀರ್, ಬಾಬು ಮುಂತಾದವರು ಇದ್ದರು.

Post a Comment

Previous Post Next Post