ನೋಡಲ್ ಅಧಿಕಾರಿ ನೇಮಕ ಅಧಿಸೂಚನೆ ರದ್ದಿಗೆ ಆಗ್ರಹಿಸಿ ವಿಕಲಚೇತನರಿಂದ ಪ್ರತಿಭಟನೆ

ಹಾಸನ: ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ವಿಶೇಷ ಚೇತನದ ಯೋಜನೆಗಳ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿರುವ ಅದಿಸೂಚನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
      ರಾಜ್ಯದಲ್ಲಿ ಪ್ರಸ್ತುತ 6022 ಗ್ರಾಮ ಪಂಚಾಯಿತಿಗಳ ಪೈಕಿ 4906 ಅರ್ಹ ಎಸ್,ಎಸ್.ಎಲ್.ಸಿ. ಪಾಸಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು (ವಿ,ಆರ್ ಡಬ್ಲೂ) 225 ತಾಲೂಕುಗಳ ಪೈಕಿ 169 ತಾಲ್ಲೂಕು ಪಂಚಾಯಿತಿಗಳಿಗೆ ಅರ್ಹ ಪದವೀಧರ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ ನೇಮಿಸಿದೆ. ಹೀಗೆ 5150 ಅರ್ಹ ವಿಕಲಚೇತನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅನಂತ ಅರ್ಪಿಸುವುದಾಗಿ ಹೇಳಿದರು.
      ಇತ್ತೀಚಿನ ದಿನಗಳಲ್ಲಿ ಮಾಹಾಮಾರಿ ಕರೋನ ಕೋವಿಡ್-19 ಗ್ರಾಮ, ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಗಳಲ್ಲಿ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ಸ್ಥಳೀಯ ಸಂಸ್ಥೆಗಳು ಸೂಚಿಸಿರುವ ಎಲ್ಲಾ ಕಾರ್ಯಕ್ರಮಗಳು ಮತ್ತು ಕರ್ತವ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಈ ಎಲ್ಲಾ ಕಾರ್ಯಗಳಿಂದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗೆ 2017 ರಿಂದ ಸತತವಾಗಿ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿರುವುದು ಉಲ್ಲೇಖನೀಯ ವಿಆರ್‍ಡಬ್ಲೂ ಎಂ.ಆರ್.ಡಬ್ಲ್ಯೂ ರವರು ಇಲಾಖೆಯ ಕಾಯಂ ಅಧಿಕಾರಿಗಳಂತೆ ಕಾರ್ಯ ನಿರ್ವಹಿಸುತ್ತಾ ದೀಪದ ಕೆಳಗೆ ಕತ್ತಲು ಎಂಬಂತೆ ನೋವನ್ನು ನುಂಗುತ್ತಾ (ಕನಿಷ್ಠ ವೇತನ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ) ಸಮಾಜದ ನಿಂದನೆಗಳನ್ನು ಸಹಿಸಿಕೊಳ್ಳುತ್ತಾ, ನೋವನ್ನು ಉಂಡು ಅಮೃತವೆಂಬ ಯೋಜನೆಗಳನ್ನು ವಿಕಲಚೇತನರಿಗೆ ಉಣಬಡಿಸುತ್ತಾ ಸಂತೋಷ ಪಡುತ್ತಿದ್ದಾರೆ. ಅಂಗವಿಕಲ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಸದೃಢಗೊಳಿಸಿ ವಿ.ಆರ್.ಡಬ್ಲ್ಯೂ ಎಂ,ಅರ್ ,ಡಬ್ಲ್ಯೂ ಯು,ಅರ್.ಡಬ್ಲ್ಯೂ ರವರನ್ನು ಬಲಗೊಳಿಸದೇ ವಿಕಲಚೇತನರು ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಮಧ್ಯೆ ಕೊಂಡಿಯಂತೆ ಕೆಲಸ ನಿರ್ವಹಿಸ ಬೇಕಾದ ಪರಿಸ್ಥಿತಿ ಬಂದಿದೆ ಎಂದು ಆತಂಕವ್ಯಕ್ತಪಡಿಸಿದರು. 
      ಮಾರ್ಗದರ್ಶಿ ಸೂತ್ರಗಳನ್ನು ಮತ್ತು ನಿಯಮಗಳನ್ನು ಗಾಳಿಗೆ ತೂರಿ ಉಲ್ಲೇಖಿತ ಪತ್ರದಲ್ಲಿರುವಂತೆ ಎ.ಸಿ.ಡಿ.ಪಿ.ಓ. ರವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿರುವುದು ಖಂಡನೀಯ, ಹಾಗೂ ಭವಿಷ್ಯತ್ತಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಖW,ಗಿಖW ಚಿಟಿಜ ಒಖW ಅವರ ಭವಿಷ್ಯತ್ತಿಗೆ ಮರಣ ಶಾಸನವಾಗಿ ಪರಿಣಮಿಸಿರುವ ಈ ವ್ಯವಸ್ಥೆಯನ್ನು ತಾಲ್ಲೂಕು ನೋಡಲ್ ಅಧಿಕಾರಿಗಳು ಈ ಕೂಡಲೇ ರದ್ದುಗೊಳಿಸಿ ಎಲ್ಲಾ ಆಯಾಮಗಳಲ್ಲಿ ಅರ್ಹರಾದ ವರ್ಷಗಳಿಂದ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ಕಾರ್ಯಕರ್ತರ ಸೇವೆಯನ್ನು ಪರಿಗಣಿಸಿ ಮಾನವೀಯತೆಯ ಆಧಾರದಲ್ಲಿ ಗ್ರಾಮ ಮತ್ತು ತಾಲ್ಲೂಕು ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಿರುವ ಅಧಿಸೂಚನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ಗ್ರಾಮೀಣ ವಿವಿದೋದೆಶ ನಗರ ಪುನರ್ ವಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ ರವರನ್ನು ತಾಲೂಕು ಅಂಗವಿಕಲರ ಅಧಿಕಾರಿಯನ್ನಾಗಿ ವಿ.ಆರ್.ಡಬ್ಲ್ಯೂ ರವರನ್ನು ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕರನ್ನಾಗಿ ಹಾಗೂ ಯು.ಆರ್.ಡಬ್ಲಯೂ ರವರನ್ನು ನಗರ ವಿಕಲಚೇತನರ ಅಭಿವೃದ್ಧಿ ಸಹಾಯಕರನ್ನಾಗಿ ಖಾಯಂಗೊಳಿಸಬೇಕು ಹಾಗೂ ಸರಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ಯು.ಆರ್.ಡಬ್ಲ್ಯೂ ರವರಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
       ಮೌನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದ ಕೆ. ಸುಬ್ರಮಣ್ಯಂ, ಎಸ್. ಕೃಷ್ಣಪ್ಪ, ಜಿ. ದೇವರಾಜು, ಬಿ.ವಿ. ಹರೀಶ್ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post