೮೯ ಗಿಡ ನೆಡುವ ಮೂಲಕ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬ ಆಚರಣೆ

ಹಾಸನ: ನಗರದ ಬಿ.ಎಂ. ರಸ್ತೆ, ಉದ್ಯೋಗ ಮಾಹಿತಿ ಕೇಂದ್ರ, ಕೆ.ಎಸ್.ಆರ್.ಟಿ.ಸಿ. ಘಟಕ-೧ರ ರಸ್ತೆ ಬದಿ ಜೆಡಿಎಸ್ ಮುಖಂಡರಾದ ಅಗಿಲೆ ಯೋಗೀಶ್ ರವರು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ೮೯ನೇ ವರ್ಷದ ಜನ್ಮದಿನದ ಅಂಗವಾಗಿ ೮೯ ವಿವಿಧ ಗಿಡಗಳನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.


       ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿರಿಯ ಮುತ್ಸದಿಗಳು, ೨ನೇ ವಾರ್ಡಿನ ಭಾಗದಲ್ಲಿಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜನ್ಮ ದಿನದ ಅಂಗವಾಗಿ ೮೯ ಗಿಡಗಳನ್ನು ನೆಡಲಾಗಿದೆ. ಪರಿಸರ ಉಳಿವಿಗಾಗಿ ಮತ್ತು ಕೊರೋನಾ ಎಂಬ ಹೆಮ್ಮಾರಿ ಓಡಿಸಲು ಪ್ರಕೃತಿಯಿಂದಲೇ ಸಾಧ್ಯವೆಂದು ಗಿಡವನ್ನು ನೆಟ್ಟು ದೇವೇಗೌಡರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು. ನಾಡು ಕಂಡ ಒಬ್ಬ ಧೀಮಂತ ನಾಯಕ, ರೈತಪರ ಹೋರಾಟಗಾರ, ಕಳಂಕರಹಿತ ರಾಜಕಾರಣಿ, ದೇಶದ ಪ್ರಧಾನಿಯಾಗಿ ತಮ್ಮ ೧೧ ತಿಂಗಳಲ್ಲಿ ಯಾರು ಮಾಡದ ಸಾಧನೆಯನ್ನು ದೇವೇಗೌಡರು ಮಾಡಿ ತೋರಿಸಿದ್ದಾರೆ. ಅಂತಹವರು ಚಿರಾಯಿವಾಗಿ ಚಿರಂಜಿವಿ ಆಗಿರಲಿ ಅವರ ಹೆಸರು ಎಂದು ಗಿಡ ನೆಡುವ ಉತ್ತಮ ಕಾರ್ಯಕ್ರಮವನ್ನು ಮಾಡಲಾಗಿದೆ. ಅವರ ಸೇವೆ ಕರ್ನಾಟಕ ರಾಜ್ಯ ಮತ್ತು ದೇಶಕ್ಕೆ ಅವಶ್ಯಕತೆ ಇರುವುದರಿಂದ ಭಗವಂತನು ಆರೋಗ್ಯ, ಆಯಾಸ್ಸು, ಅಧಿಕಾರ ಕೊಡಲಿ ಎಂದು ದೇವರಲ್ಲಿ ಕೋರುವುದಾಗಿ ಹೇಳಿದರು.

      ಇದೆ ವೇಳೆ ೨ನೇ ವಾರ್ಡಿನ ನಗರಸಭೆ ಸದಸ್ಯ ಮಂಜುನಾಥ್, ಜೆಡಿಎಸ್ ಯುವ ಮುಖಂಡ ಸುನೀಲ್ ಇತರರು ಉಪಸ್ಥಿತರಿದ್ದರು


Post a Comment

Previous Post Next Post