ಅಕ್ರಮ ಮರಳುಗಾರಿಕೆ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆ.
ರೌಡಿಶೀಟರ್ ಜೊತೆಗೆ ಬಂದು ಜಿಲ್ಲಾಧ್ಯಕ್ಷನ ಪುಂಡಾಟಿಕೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಘಟನೆ.
ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮತ್ತು ಬೆಂಬಲಿಗರಿಂದ ಪೊಲೀಸ್ ಠಾಣೆಯಲ್ಲಿ ಗಲಾಟೆ.
ಅಕ್ರಮ ಮರಳು ಸಾಗಾಣಿಕೆ ವಿರುದ್ಧ ರೌಡಿಶೀಟರ್ ಮಧು ಆಲಿಯಾಸ್ ಬೀರಡವಳ್ಳಿ ಮಧು ವಿರುದ್ಧ ದಾಖಲಾಗಿದ್ದ ಪ್ರಕರಣ.
ಬಿಜೆಪಿಯ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ ಬಲಗೈ ಭಂಟರಾಗಿರೋ ರೌಡಿಶೀಟರ್ ಮಧು ಮತ್ತು ಭರತ್.
ಮದು ವಿರುದ್ಧ ಪ್ರಕರಣ ದಾಖಲು ಮಾಡಿದ್ದ ಪೊಲೀಸರಿಗೆ ಬೆದರಿಕೆ ಒಡ್ಡಿರುವ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್.
ಅರೇಹಳ್ಳಿ ಪೊಲೀಸರ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಜಿಲ್ಲಾಧ್ಯಕ್ಷ.
ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿರುವ ರೌಡಿಶೀಟರ್ ಮಧು.
ಗಲಾಟೆ ಮಾಡಿರುವ ದೃಶ್ಯಾವಳಿಗಳು ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ದಾಖಲು.
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಮುಂದೆ ಪ್ರಕರಣ ದಾಖಲು ಮಾಡಿದರೆ ಎಲ್ಲರನ್ನೂ ಎತ್ತಂಗಡಿ ಮಾಡುವ ಬೆದರಿಕೆ.
ಇಂದಿನ ಪಿಎಸ್ಐ ಎತ್ತಂಗಡಿ ಆಧಾರದಲ್ಲಿಯೇ ನಿಮ್ಮನ್ನು ಎತ್ತಂಗಡಿ ಮಾಡುವ ಬೆದರಿಕೆ ಒಡ್ಡಿದ ಜಿಲ್ಲಾಧ್ಯಕ್ಷ.
ಜಿಲ್ಲಾಧ್ಯಕ್ಷ ಪುಂಡಾಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸರ್ವಜನಿಕರು.
ಪುಂಡಾಟಿಕೆ ನಡೆಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿರುವ ಸಿಬ್ಬಂದಿಗಳು
Tags
ಹಾಸನ