ಜನಪ್ರಿಯ ಆಸ್ಪತ್ರೆಯು ಆರು ವರ್ಷ ಯಶಸ್ವಿಯಾಗಿ ಪೂರೈಸಿ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಬದಲ್ಲಿ ಸಾಮಾನ್ಯ ಜನರಿಗೆ ಖಾಸಗಿ ಆರೋಗ್ಯ ವಿಮಾ ಸೌಲಭ್ಯ ಸಿಗುವಂತೆ ಜನಪ್ರಿಯ ಆರೋಗ್ಯ ಕಾರ್ಡನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದು , 6 ತಿಂಗಳ ಸಮಯದಲ್ಲಿ 300 ಕ್ಕೂ ಹೆಚ್ಚು ಫಲಾನುಭವಿಗಳಿಗೆ 3 ಕೋಟಿಗಿಂತ ಹೆಚ್ಚಿನ ವಿಮಾ ಸೌಲಭ್ಯ ಸಿಗುವಂತೆ ಜನಪ್ರಿಯ ಆಸ್ಪತ್ರೆ ಮಾಡಿದೆ . ಇದಲ್ಲದೆ ಇದರ ವಿಮಾ ಕಂತಿನ ಹಣವನ್ನು ಶೇಕಡಾ 50 ರಷ್ಟು ಜನಪ್ರಿಯ ಚಾರಿಟೇಬಲ್ ಟ್ರಸ್ಟ್ ಬರಿಸಿ ಈ ಜನಪ್ರಿಯ ಆರೋಗ್ಯ ಕಾರ್ಡಿನ ಮುಖಾಂತರ ಖಾಸಗಿ ಆರೋಗ್ಯ ವಿಮಾ ಸೌಲಭ್ಯದ ಅರಿವು ಮೂಡಿಸಿ ಸೌಲಭ್ಯ ಸಿಗುವಂತೆ ಮಾಡಿದೆ .
ಈ ಸಂದರ್ಭದಲ್ಲಿ ಹಗಲಿರುಳು ದುಡಿಯುವ 25 ಜನ ಆಶಾ ಕಾರ್ಯಕರ್ತರಿಗಾಗಿ 25 ಲಕ್ಷ ರೂಪಾಯಿಯ ಉಚಿತ ವಿಮಾ ಯೋಜನೆಯನ್ನು ಮಾಡಿದ್ದು ಇವತ್ತು ಮಾನ್ಯ ಜಿಲ್ಲಾಧಿಕಾರಿಗಳಿಂದ ಹಸ್ತಾಂತರಿಸಲಾಯಿತು.
Tags
ಹಾಸನ