ಹಾಸನ,ಅ.15:ಪಿ.ಟಿ.ಸಿ.ಎಲ್ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಹಾಗೂ ನ್ಯಾಯ ಸಮ್ಮತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮ ಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಶೋಷಿತ ಸಮುದಾಯಗಳ ಭೂ ಒಡೆತನ ಹಕ್ಕುಗಳ ಸಂರಕ್ಷಣೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಪಿ.ಟಿ.ಸಿ.ಎಲ್ ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳು ಹಾಗೂ ವಿಲೇವಾರಿ ಆಗಿರುವ ಸ್ವರೂಪದ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ಇತರ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳ ಬಹುದು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಮರಿಜೋಸೆಫ್ ಹಾಗೂ ವಿಜಯ್ ಕುಮಾರ್, ಮಹಾಂತಪ್ಪ ಹೂ ರಾಜ್ ಮತ್ತಿತರರು ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಪಿ.ಟಿ.ಸಿ.ಎಲ್ ಪ್ರಕರಣಗಳನ್ನು ಏಕಮುಖವಾಗಿ ವಿಲೇವಾರಿ ಮಾಡಲಾಗಿದ್ದು ಅನುಸೂಚಿತ ಜಾತಿ, ಅನುಸೂಚಿತ ಪಂಗಡದವರ ಹಿತ ಕಾಯಬೇಕು ತಿರಸ್ಕøತಗೊಂಡಿರುವ ಅರ್ಜಿಗಳ ಪುನರ್ ಪರಿಶೀಲನೆ ಯಾಗಬೇಕು ಎಂದು ಮನವಿ ಮಾಡಿದರು.
ಇದೇ ರೀತಿ ಹೆಚ್.ಆರ್ ಪಿ ಮೀಸಲು ಪ್ರದೇಶದಲ್ಲಿ ವಾಸಿಸುತ್ತಿ ರುವ ಅಲೆಮಾರಿ ಸಮುದಾಯ, ಅರೆ ಅಲೆಮಾರಿ ಸಮುದಾಯ ಹಾಗೂ ಅನುಸೂಚಿತ ಜಾತಿ, ಪಂಗಡದ 98 ಕುಟುಂಬಗಳಿಗೆ ಜಾಗ ನೀಡಬೇಕು ಎಂದು ಸದಸ್ಯರು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಹೇಳಿದರು, ಹೆಚ್.ಆರ್.ಪಿ. ಮೀಸಲು ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಅನು ಸೂಚಿತ ಜಾತಿ,ಪಂಗಡ ನಿವಾಸಿಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.
ಇದೇ ವೇಳೆ ಸಾಲಗಾಮೆ ಹೋಬಳಿ, ಕಡದರವಳ್ಳಿ ಗ್ರಾಮದ ಪ.ಜಾತಿಗೆ ಸೇರಿದ 23 ಮಂದಿ ಜೀತ ವಿಮುಕ್ತರಿಗೆ ಬದಲಿ ಜಾಗ ನೀಡುವ ಕುರಿತು ಅರಣ್ಯ ಇಲಾಖೆ ಯೊಂದಿಗೆ ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ತಹಸೀಲ್ದಾ ರರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತ ನಾಡಿ 43 ವರ್ಷಗಳಿಂದ ಶೆಟ್ಟಿಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಅಲೆಮಾರಿ ಹಾಗೂ ಅನುಸೂಚಿತ ಜಾತಿ ಪಂಗಡಗಳ ಜನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಅವರ ಮನೆಗಳಿಎ ಇ ಸ್ವತ್ತು ಮಾಡಿಕೊಡ ಲಾಗಿದೆ ಎಂದರು.
ಸಕಲೇಶಫುರ ಹಾಗೂ ಬೇಲೂರು ತಾಲ್ಲೂಕಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಲೆಮಾರಿ ಸಮುದಾಯ ಶಿಳ್ಳಕ್ಯಾತ ಬೆಸ್ತರು ಹೇಮಾವತಿ ಜಲಾಶಯದ ಹಿನ್ನಿರಿನಲ್ಲಿ ವಾಸಿಸುತ್ತಿgದ್ದ 94,94ಸಿಸಿಯಡಿ ಅರ್ಜಿ ಸಲ್ಲಿಸಿರು ವವರಿಗೆ ಶೀಘ್ರವೇ ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.