ಅರಸೀಕೆರೆ-ತಾಲೂಕಿನ ಹೆಸರಾಂತ ವೈದ್ಯ ಹಾಗೂ ಬಿಜೆಪಿ ಮುಖಂಡ ಕಡಲೆಮಗ್ಗೆ ಗ್ರಾಮದ ಡಾ.ಶಿವಾನಂದ್(46) ಅನಾರೋಗ್ಯದ ಹಿನ್ನಲೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.ಪತ್ನಿ,ಇಬ್ಬರು ಪುತ್ರರನ್ನು ಮೃತರು ಅಗಲಿದ್ದು ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸಂಜೆ ನೆರವೇರಿತು.ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ,ಎ.ಎಸ್.ಬಸವರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಪದಾಕಾರಿಗಳು, ಶಿಕ್ಷಕ ರುದ್ರೇಶ್, ಮುಖಂಡ ವಿನಯ್ ಕಡಲಮಗ್ಗೆ ಸೇರಿ ತಾಲೂಕಿನ ವೈದ್ಯ ಸಮೂಹ ಸಂತಾಪ ಸೂಚಿಸಿದೆ