ಆರ್.ಆರ್ ನಗರದ ಓಲಾ, ಊಬರ್ ಹಾಗೂ ಟ್ಯಾಕ್ಸಿ ಚಾಲಕರು ಕಾಂಗ್ರೆಸ್​ಗೆ ಸೇರ್ಪಡೆ

ಬೆಂಗಳೂರು: ಆರ್.ಆರ್. ನಗರದ ಓಲಾ, ಊಬರ್ ಹಾಗೂ ಟ್ಯಾಕ್ಸಿ ಡ್ರೈವರ್​ಗಳು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರರನ್ನು ಚಾಲಕರು ಅವರದೇ ಮುಖದ ಮುಖವಾಡ ಧರಿಸಿ ಸ್ವಾಗತಿಸಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್​ ಕೊರೊನಾ ಬಂದ ಮೇಲೆ ಚಾಲಕರಾಗಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದಿಂದ ಸಹಾಯ ಆಗಬೇಕು ಅಂತ ಒತ್ತಾಯ ಮಾಡಿದೆವು. ನಾವು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಕೊಡಿ ಎಂದೆವು ಆದರೆ ಸಿಎಂ ಏಳು ಲಕ್ಷದ ಎಪ್ಪತ್ತೈದು ಸಾವಿರ ಜನರಿಗೆ ಮಾತ್ರ ಒಂದು ಬಾರಿ ಐದು ಸಾವಿರ ಘೋಷಿಸಿದರು ಆದರೆ ರಾಜ್ಯದಲ್ಲಿ ಲೈಸೆನ್ಸ್ ಇರುವವರು 32 ಲಕ್ಷ ಚಾಲಕರಿದ್ದಾರೆ ಚಾಲಕರ ಕುಟುಂಬಕ್ಕೆ ಆಗ್ತಿರೋ ತೊಂದರೆ ಬಗ್ಗೆ ಈ ಸರ್ಕಾರಕ್ಕೆ ಕಣ್ಣು ಕಾಣಲಿಲ್ಲ, ಕಿವಿಯೂ ಕೇಳಲಿಲ್ಲ ಎಂದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಲ್ಲಿ ಕಾರ್ಯಕ್ರಮದಲ್ಲಿ ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

Post a Comment

Previous Post Next Post