ಹೊಳೆನರಸೀಪುರ: ಪಟ್ಟಣ ಸಮೀಪ ಹಾಸನ ಮೈಸೂರು ರಸ್ತೆಯ ಕಡುವಿನಕೋಟೆ ಕ್ರಾಸ್ ಸಮೀಪ ಬಿಯರ್ ತುಂಬಿದ ಲಾರಿ ಪಲ್ಟಿ ಆಗಿದ್ದು ನಷ್ಟ ಉಂಟಾಗಿದೆ.
ರಾತ್ರಿ ವೇಳೆ ಹಾಸನ ವುಡ್ಪೀಕರ್ ಬ್ರೀವರೀಸ್ನಿಂದ ಕೇರಳಕ್ಕೆ 900 ಬಾಕ್ಸ್ ಬಿಯರ್ ಸಾಗಿಸುತ್ತಿದ್ದ ಲಾರಿ 10.30 ರ ವೇಳೆಯಲ್ಲಿ ಕಡುವಿನಕೋಟೆ ಕ್ರಾಸ್ ಸಮೀಪ ರಸ್ತೆ ಬದಿಗೆ ಉರುಳಿಬಿದ್ದು ಲಾರಿಯಲ್ಲಿದ್ದ ಬಿಯರ್ ಬಾಟಲ್ ಬಾಕ್ಸ್ಗಳು ರಸ್ತೆಗೆ ಉರುಳಿದ್ದು ಬಹಳಷ್ಟು ಬಾಕ್ಸ್ಗಳು ಒಡೆದುಹೋಗಿದೆ. ವಿಷಯ ತಿಳಿದ ಅಬಕಾರಿ ಇನ್ಸ್ಪೆಕ್ಟರ್ ಶಂಕರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.