ಸರ್ವ ಸದಸ್ಯರ ವಾರ್ಷಿಕ ಮಹಾಸಭೆ


ಪಾಂಡವಪುರ : ತಾಲೂಕಿನ ಹೊಸಕೋಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ನರಸಿಂಹೇಗೌಡ ಅವರ ಅಧ್ಯಕ್ಷತೆಯಲ್ಲಿ 2019-20ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯಲ್ಲಿ 2019-20ನೇ ಸಾಲಿನ ಸಂಘದ ಆಡಿಟ್ ವರದಿ ಜಮಾ-ಖರ್ಚು, ಲಾಭ-ನಷ್ಟ, ಆಸ್ತಿ-ಜವಾಬ್ದಾರಿ ತಃಖ್ತೆಯನ್ನು ಪರಿಶೀಲಿಸಿ ಅಂಗೀಕರಿಸಲಾಯಿತು. 2020-21ನೇ ಸಾಲಿನ ಅಂದಾಜು ಬಡ್ಜೆಟ್ ಮಂಜೂರು ಮಾಡಲು ತೀರ್ಮಾನಿಸಲಾಯಿತು. 2020-21ನೇ ಸಾಲಿಗೆ ಲೆಕ್ಕ ಪರಿಶೋಧಕರನ್ನು ನೇಮಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು. ಬೈಲಾ ತಿದ್ದುಪಡಿ ಕರ್ನಾಟಕ ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆ ಮತ್ತು ನಿಯಮಾವಳಿಗಳಿಗನುಗುಣವಾಗಿ ಬೈಲಾ ತಿದ್ದುಪಡಿ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಇದೇ ವೇಳೆ ಸಂಘಕ್ಕೆ 2019-20ನೇ ಸಾಲಿನಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತರಾದ ಚಲುವೇಗೌಡ (15,898 ಲೀಟರ್), ಎಚ್.ಡಿ.ದೇವರಾಜು (9,530ಲೀಟರ್), ತೇಜಸ್ವಿನಿ (9,470ಲೀಟರ್) ಅವರನ್ನು ಸನ್ಮಾನಿ ಗೌರವಿಸಲಾಯಿತು. ಜತೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸಹನಾ, ಅನುಶ್ರೀ, ಹೇಮಂತ್‍ಕುಮಾರ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಯಧುರಾಜು, ಸೌಮ್ಯ, ನಿರ್ಮಲಾ ಅವರನ್ನು ಸನ್ಮಾನಿಸಲಾಯಿತು.
7ಲಕ್ಷ ರೂ. ನಿವ್ವಳ ಲಾಭ : ಈ ವೇಳೆ 2019-20ನೇ ಸಾಲಿನಲ್ಲಿ ಸಂಘವು 7,17,390ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎನ್.ರಾಘವೇಂದ್ರ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಆರ್.ವೆಂಕಟೇಶ್, ನಿರ್ದೇಶಕರಾದ ಎಚ್.ಕೆ.ಶಿವಕುಮಾರಸ್ವಾಮಿ, ಎಚ್.ಕೆ.ಕುಮಾರ್, ರವಿಕುಮಾರ್, ಪಾಂಡುರಂಗೇಗೌಡ (ಮಂಜುನಾಥ್), ಎಚ್.ಟಿ.ಶಿವಕುಮಾರ್, ಮಣಿಕಂಠಚಾರಿ, ಜಯಮ್ಮ, ಲತಾ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎನ್.ರಾಘವೇಂದ್ರ, ಲೆಕ್ಕ ಪರಿಶೋಧಕ ಎಚ್.ಟಿ.ಗಿರೀಶ್‍ಬಾಬು, ಹಾಲು ಪರೀಕ್ಷಕ ಎಂ.ನಾಗೇಶ್, ಸಹಾಯಕ ಪಾಂಡುರಂಗೇಗೌಡ, ಶುಚಿಗಾರ ಕೋದಂಡರಾಮು ಇತರರಿದ್ದರು.

Post a Comment

Previous Post Next Post