ವೈದ್ಯಕೀಯ ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾಸನ,ಅ.12:- ಕೇಂದ್ರ ಪುರಸ್ಕøತ ಯೋಜನೆಯಡಿ ಮೇಲ್ದರ್ಜೆಗೇರಿಸಲಾದ ಆಸ್ಪತ್ರೆಗಳಲ್ಲಿ ಸೃಜನೆಯಾಗಿರುವ ವೈದ್ಯಕೀಯ, ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ 2021ರ ಮಾರ್ಚ್ 31ರವರೆಗೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಅರ್ಜಿಗಳನ್ನು ವೆಬ್‍ಸೈಟ್ ವಿಳಾಸ www.hassan.nic.in  ನಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಆಯುಷ್ ಕಚೇರಿಗೆ ನವೆಂಬರ್ 10 ರೊಳಗೆ ಸಲ್ಲಿಸಬಹುದಾಗಿದೆ. ನಂತರ ಬಂದ ಅರ್ಜಿಗಳನ್ನುತಿರಸ್ಕರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಅಚೇರಿ, ಹೊಸಲೈನ್ ರಸ್ತೆ ಹಾಸನ, ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಟ್ಟದ ಆಯುಷ್ ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿ ಹಾಗೂ ಜಿಲ್ಲೆ, ಉಪ ಜಿಲ್ಲೆ ಮಟ್ಟದಲ್ಲಿ ಆಯುಷ್ ಆಸ್ಪತ್ರೆಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಯವರು ತಿಳಿಸಿದ್ದಾರೆ.

Post a Comment

Previous Post Next Post