ಕೆಕೆಆರ್ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕುಕೊಂಡ ಕೊಹ್ಲಿ ಪಡೆ 20 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿ 195 ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ಆರ್ ಸಿಬಿ ಪರ ಆರಂಭಿಕರಾಗಿ ದಾಂಡಿಗತನಕ್ಕಿಳಿದ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಆಶದಾಯಕ ಆರಂಭವನ್ನು ನೀಡಿದರು. ಪ್ರಾರಂಭದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದ ಪಡಿಕ್ಕಲ್ 4 ಬೌಂಡಿರಿ, 1 ಸಿಕ್ಸರ್ ನೊಂದಿಗೆ 31 ರನ್ ಗಳಿಸಿ ರಸ್ಸೆಲ್ ಅವರ ಎಸೆತಕ್ಕೆ ಬೌಲ್ಡ್ ಔಟ್ ಆದರು. ಪಡಿಕ್ಕಲ್ ಜೊತೆ ರಕ್ಷಣಾತ್ಮಕವಾಗಿ ಬ್ಯಾಟ್ ಬೀಸಿದ ಫಿಂಚ್ ತಂಡಕ್ಕೆ ಆಸರೆಯಾದರು. ಫಿಂಚ್ 47 ರನ್ ಗಳಿಸಿ ಪ್ರಸಿದ್ಧ್ ಕೃಷ್ಣ ಎಸೆತಕ್ಕೆ ಬೌಲ್ಡ್ ಆದರು. ನಾಯಕ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಉತ್ತಮ ಜೊತೆಯಾಟ ನೀಡಿದರು.
ಎಬಿ ಡಿವಿಲಿಯರ್ಸ್ ಅಜೇಯ 73 ರನ್ ಗಳಿಸಿದರೆ ನಾಯಕ ವಿರಾಟ್ ಕೊಹ್ಲಿ ಅಜೇಯ 33 ರನ್ ಗಳಿಸಿದರು.
ಆರ್ ಸಿಬಿ ನಿಗದಿತ 20 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿ 195 ರ ಗುರಿಯನ್ನು ಕೆಕೆಆರ್ ತಂಡಕ್ಕೆ ನೀಡಿದೆ.
ಕೆಕೆಆರ್ ಪರ ರಸ್ಸೆಲ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದು ಉತ್ತಮವಾಗಿ ಬೌಲ್ ಮಾಡಿದರು.