ಪೊಲೀಸರ ಹೆಸರಲ್ಲಿ ನಕಲಿ ಪ್ರಮಾಣಪತ್ರ: ಹಾಸನದಲ್ಲಿ ನಾಲ್ವರ ಬಂಧನ

ಹಾಸನ: ನಕಲಿ ಪೊಲೀಸ್ ಪ್ರಮಾಣಪತ್ರ ಮಾಡಿಕೊಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಶೆಟ್ಟಿಹಳ್ಳಿ ಗ್ರಾಮದ ಪರಮೇಶ್ (38), ಹೇಮಾವತಿ ನಗರದ ಸುರಭಿ ಜೆರಾಕ್ಸ್ ಮಾಲೀಕ ಮಹೇಶ(36), ಮಯ್ಯೂರ ರಬ್ಬರ್ ಸ್ಟ್ಯಾಂಪ್ ಮಾಲೀಕ ಹುಣಸಿನಕೆರೆಯ ಶ್ರೀಕಾಂತ್ (38), ಪಾಂಡುರಂಗ ದೇವಾಲಯದ ಬಳಿಯ ಕಾವೇರಿ ಪ್ರಿಂಟಿಂಗ್​ ಪ್ರೆಸ್ ಮಾಲೀಕ ಮಾದಪ್ಪ (54) ಬಂಧಿತ ಆರೋಪಿಗಳು ಖಾಸಗಿ ಕಂಪನಿಗಳಲ್ಲಿ ಚಾಲಕ ಹುದ್ದೆಗೆ ಸೇರಲು ಸ್ಥಳೀಯ ಪೊಲೀಸ್ ಠಾಣೆಯ ಪ್ರಮಾಣಪತ್ರ ಬೇಕಾಗಿರುತ್ತದೆ. ಅಭ್ಯರ್ಥಿಗಳು ಪ್ರಮಾಣಪತ್ರ ಪಡೆಯಬೇಕಾದರೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇದನ್ನು ಬಂಡವಾಳ ಮಾಡಿಕೊಂಡ ಪರಮೇಶ್, ಅಭ್ಯರ್ಥಿಗಳಿಂದ ಹಣ ಪಡೆದು ನಕಲಿ ಪೊಲೀಸ್​ ಪ್ರಮಾಣಪತ್ರ ತಯಾರಿಸಿ ಕೊಡುತ್ತಿದ್ದ ಎನ್ನಲಾಗಿದೆ.ಒಂದು ಪ್ರಮಾಣಪತ್ರಕ್ಕೆ ಐದರಿಂದ ಹತ್ತು ಸಾವಿರ ಪಡೆದು ನಗರದ ಎಲ್ಲಾ ಪೊಲೀಸ್ ಠಾಣೆಯ ನಕಲಿ ಸೀಲ್​ಗಳನ್ನು ಮಾಡಿಸಿಕೊಂಡು ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Post a Comment

Previous Post Next Post