ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ ವಿಷ ಸೇವಿಸಿದ ತಾಯಿ ಗಂಭೀರ


ಹಾಸನ: ಗಂಡನೇ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕೊಲೆಯಾದ ಮಹಿಳೆಯನ್ನು ಪೂಜಾ(25) ಎಂದು ಗುರುತಿಸಲಾಗಿದೆ. ಪತಿ ಗಂಗಾಧರ್ ತಡರಾತ್ರಿ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದಂಪತಿ ಐದು ಐದು ವರ್ಷದ ಮಗನೊಂದಿಗೆ ವಾಸವಾಗಿತ್ತು.

ಕೃತ್ಯಕ್ಕೆ ಕಾರಣ :
ಆರೋಪಿ ಗಂಗಾಧರ್ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ. ಹೀಗಾಗಿ ಅವರ ನಡುವೆ ಆಗಾಗ ಜಗಳ ನಡೆದು ರಾಜಿ ಪಂಚಾಯತಿಗಳನ್ನು ಮಾಡಲಾಗಿತ್ತು. ತಡರಾತ್ರಿ ಗಂಡ-ಹೆಂಡತಿ ನಡುವೆ ಗಲಾಟೆ ಪ್ರಾರಂಭವಾಗಿದೆ. ಈ ವೇಳೆ ಕೋಪಗೊಂಡ ಗಂಡ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಗ ಕೊಲೆ ಮಾಡಿದ ವಿಷಯ ಕೇಳಿ ಬೇರೆ ಮನೆಯಲ್ಲಿ ವಾಸವಿದ್ದ ಆರೋಪಿಯ ತಾಯಿ ವಿಷ ಸೇವಿಸಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post