ದಲಿತ ಸಂಘಟನೆ, ರೈತ ಸಂಘಟನೆಗಾಗಿ ಅಹರ್ನಿಶಿ ದುಡಿದ ಸಮಾಜಮುಖಿ ಚಿಂತನೆಯ ಹೋರಾಟಗಾರ, ಸಾಕ್ಷರತಾ ಆಂದೋಲನದ ಕಟ್ಟಾಳು ಕೊಟ್ಟೂರು ಶ್ರೀನಿವಾಸ್ (60) ಇನ್ನಿಲ್ಲ...
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ (ಫಾದರ್ ಮುಲ್ಲರ್) ಕೊನೆಯುಸಿರೆಳೆದರು. ಕಿಡ್ನಿ ವೈಫಲ್ಯ ಕಾರಣಕ್ಕಾಗಿ ಹಾಸನ ಮತ್ತು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಡಯಲಿಸಿಸ್ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಅವರ ಸ್ಥಿತಿ ಗಂಭೀರವಾಗಲು ಕಾರಣವಾಯಿತು.
ಮೃತರು ಪತ್ನಿ ಪ್ರಮಿಳಾ ಮಗಳು ರುಚಿರ, ಮೊಮ್ಮಗ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
Tags
ಹಾಸನ