ಬದಲಾಗಲಿದೆ ವೋಟರ್ ಐಡಿ ಕಾರ್ಡ್ ಈಗ ಡಿಜಿಟಲ್ ಗುರುತಿನ ಚೀಟಿ

ನವದೆಹಲಿ, ಡಿಸೆಂಬರ್ 10: ಆಧಾರ್ ಕಾರ್ಡ್‌ನಂತೆಯೇ ನಿಮ್ಮ ಮತದಾರ ಗುರುತಿನ ಚೀಟಿ ಕೂಡ ಡಿಜಿಟಲೀಕರಣವಾಗಲಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಮತದಾರರು ತಮ್ಮ ಮತದಾರರ ಫೋಟೊ ಐಡೆಂಟಿಟಿ ಕಾರ್ಡ್ (ಎಪಿಕ್) ಅಥವಾ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಟಲ್ ಆವೃತ್ತಿ ಬಳಸಿಯೇ ಮತ ಚಲಾವಣೆಯನ್ನೂ ಮಾಡಬಹುದು.

ಚುನಾವಣಾ ಸಮಿತಿಯ ಯೋಜನೆ ಸಿದ್ಧಗೊಂಡಿದ್ದು, ಆಯೋಗವು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ಮತದಾರರಿಗೆ ಈ ಸೌಲಭ್ಯವನ್ನು ಶೀಘ್ರದಲ್ಲಿಯೇ ಒದಗಿಸಲಿದ್ದಾರೆ. ಹೊಸದಾಗಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸುವ ಮತದಾರರು ಈ ಸೌಲಭ್ಯವನ್ನು ಸ್ವಯಂಚಾಲಿತವಾಗಿಯೇ ಪಡೆದುಕೊಳ್ಳಲಿದ್ದಾರೆ. ಆದರೆ ಹಾಲಿ ಮತದಾರರು ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ.


ಡೌನ್‌ಲೋಡ್ ಮಾಡಬಲ್ಲ ಡಿಜಿಟಲ್ ಮತದಾರರ ಚೀಟಿಯ ಜತೆಗೆ ಪ್ರಸ್ತುತ ಇರುವ ಎಪಿಕ್ ಸೌಲಭ್ಯವೂ ಚಾಲ್ತಿಯಲ್ಲಿ ಇರಲಿದೆ. ಗುರುತಿನ ಚೀಟಿಯ ವಿತರಣೆಯನ್ನು ಸುಲಭಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮುಂದೆ ಓದಿ.


ಮತದಾರರ ಸೌಲಭ್ಯ ನೋಂದಾಯಿತ ಮೊಬೈಲ್ ಸಂಪರ್ಕಕ್ಕೆ ಕಾರ್ಡ್‌ಅನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಹೊಸ ಮತದಾರರಿಗೆ ಸೌಲಭ್ಯಗಳು ಸಿಗಲಿವೆ. ಮತದಾರರ ಚೀಟಿಗೆ ಹೊಸ ಅರ್ಜಿ ಸಲ್ಲಿಸಲು ಸಂಬಂಧಿತ ಅಧಿಕಾರಿಗಳಿಂದ ಒಮ್ಮೆ ಅನುಮೋದನೆ ದೊರೆತರೆ ಅರ್ಜಿದಾರರು ಡಿಜಿಟಲ್ ಮಾದರಿಯಲ್ಲಿ ಅದನ್ನು ಪಡೆಯಬಹುದಾಗಿದೆ.

ಎರಡು ವಿಭಿನ್ನ ಕ್ಯೂಆರ್‌ ಕೋಡ್ ಎಪಿಕ್‌ನ ಡಿಜಿಟಲ್ ಮಾದರಿಯು ಎರಡು ವಿಭಿನ್ನ ಕ್ಯೂಆರ್ ಕೋಡ್ ಹೊಂದಿರಲಿದೆ. ಒಂದು ಕ್ಯೂಆರ್ ಕೋಡ್ ಮತದಾರರ ಹೆಸರು ಮತ್ತು ಇತರೆ ಕೆಲವು ನಿರ್ದಿಷ್ಟ ವಿವರಗಳು ಒಳಗೊಂಡಿದ್ದರೆ, ಇನ್ನೊಂದರಲ್ಲಿ ಮತದಾರರ ಇತರೆ ಮಾಹಿತಿಗಳು ಲಭ್ಯವಾಗಲಿವೆ. ಡೌನ್‌ಲೋಡ್ ಮಾಡಲಾದ ಎಪಿಕ್‌ನಲ್ಲಿರುವ ಕ್ಯೂಆರ್ ಕೋಡ್‌ನಲ್ಲಿ ದಾಖಲಾದ ಮಾಹಿತಿಗಳ ಆಧಾರದಲ್ಲಿ ಮತದಾನದ ಹಕ್ಕು ಸಿಗಲಿದೆ.

ಕಾರ್ಡ್ ಕಳೆದುಕೊಂಡವರೂ ಪಡೆಯಬಹುದು ಚುನಾವಣಾ ಆಯೋಗದ ಅನುಮತಿ ದೊರೆತ ಬಳಿಕ ಡಿಜಿಟಲ್ ಎಪಿಕ್ ಸೇವೆಯು ಮುಂದಿನ ವರ್ಷ ನಡೆಯುಲಿರುವ ಐದು ವಿಧಾನಸಭೆ ಚುನಾವಣೆಗಳಿಗೂ ಮೊದಲೇ ಲಭ್ಯವಾಗಲಿದೆ. ಡಿಜಿಟಲ್ ವೋಟರ್ ಐಡಿಯ ಎಲ್ಲ ರೂಪುರೇಷೆ ಸಿದ್ಧವಾಗಿದ್ದು, ಆಯೋಗದ ಅಂತಿಮ ಅನುಮತಿ ಸಿಗಬೇಕಿದೆ.

Post a Comment

Previous Post Next Post