ಜ.18 ರಿಂದ 5 ದಿನಗಳ ಕಾಲ ರಂಗಸಂಗೀತ ತರಬೇತಿ ಶಿಬಿರ


ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜನವರಿ 18 ರಿಂದ ಜನವರಿ 22ರ ವರೆಗೂ 5 ದಿನಗಳ ಕಾಲ ಕರ್ನಾಟಕ ನಾಟಕ ಅಕಾಡೆಮಿಯು ಹಾಸನದ ಶ್ರೀ ವೀರಭದ್ರೇಶ್ವರ ಸ್ವಾಮಿ ಕಲಾ ಸಂಘದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ರಂಗ ಸಂಗೀತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಕಲಾವಿದರು ರಂಗಗೀತೆಗಳು, ಲಯುವಾದ್ಯ, ಹಾರ್ಮೋನಿಯಂ ಮೊದಲಾದ ಬಗ್ಗೆ ರಾಜ್ಯ ನುರಿತ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ತರಬೇತಿ ನೀಡಲಿದ್ದಾರೆ. 2021 ಜನವರಿ 14ರ ಒಳಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕರಾಗಿರುವ ಹೆಚ್.ಎಂ. ನಾಗರಾಜರಾವ್ ಮೊ. 8722064169 ಅಥವ ಶ್ರೀ ವೀರಭದ್ರೇಶ್ವರ ಸ್ವಾಮಿ ಕಲಾ ಸಂಘದ ಯಲಗುಂದ ಶಾಂತಕುಮಾರ್ ಮೊ. 9482106493 ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ. 


Post a Comment

Previous Post Next Post