ಜನವರಿ 10 ರಂದು ಹುಣಸಿನಕೆರೆ ಹಬ್ಬ: ಅಮ್ಜಾದ್ ಖಾನ್

ಹಾಸನ: ಸ್ಥಳೀಯ ಜನರ ಸಂಬಂಧವನ್ನು ಬೆಸೆಯುವ ಉದ್ದೇಶದಲ್ಲಿ ಜನವರಿ 9ರ ಶನಿವಾರದಂದು ಪರಿಸರ ಜಾಗೃತಿ ಜಾಥವನ್ನು ನಡೆಸಿ, ಜನವರಿ10ರ ಭಾನುವಾರದಂದು ಹುಣಸಿನ ಕೆರೆ ಹಬ್ಬ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಮ್ಜಾದ್ ಖಾನ್ ಮತ್ತು ಕಾರ್ಯದರ್ಶಿ ದೇವಿಕಾಮಧು ತಿಳಿಸಿದರು.

       ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹುಣಸಿನ ಕೆರೆಯೊಂದಿಗೆ ಸ್ಥಳೀಯರ ಸಂಬಂಧವನ್ನು ಬೆಸೆಯುವ ಉದ್ದೇಶದಲ್ಲಿ ನಮ್ಮ ಕೆರೆ ನಮ್ಮ ಆಸ್ತಿ-ಸಂರಕ್ಷಿಸೋಣ ಘೋಷಣೆಯೊಂದಿಗೆ ಹಾಸನ ನಗರದ ಎ.ಪಿ.ಜೆ. ಅಬ್ದೂಲ್ ಕಲಾಂ ರಸ್ತೆ ಬಳಿ ಇರುವ ಉದ್ಯಾನವನದ ಆವರಣದಿಂದ ಇದೆ ಶನಿವಾರ ಮತ್ತು ಭಾನುವಾರದಂದು ಬೆಳಿಗ್ಗೆ 8:30 ರಿಂದ ಜಾಗೃತಿ ಜಾಥ ಮತು ವೃತ್ತ ಸಭೆಗಳು, ಸ್ಪರ್ದೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶನಿವಾರ ನಡೆಯುವ ಕಾರ್ಯಕ್ರಮದ ಜಾಥವನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ಉದ್ಘಾಟಿಸಲಿದ್ದಾರೆ. ಇದೆ ವೇಳೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆಯ ಸದಸ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸರಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಲೀಲಾವತಿಯವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇನ್ನು ಭಾನುವಾರ ನಡೆಯುವ ಕಾರ್ಯಕ್ರವನ್ನು ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರು ಚಾಲನೆ ಕೊಡಲಿದ್ದಾರೆ. ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಪುಟ್ಟಯ್ಯ, ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಚಿಕ್ಕಟ್ಟೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಕಾಂಚನಮಾಲ ಭಾಗವಹಿಸಲಿದ್ದಾರೆ ಎಂದು ಹೇಳಿದರು. 



       ಹಸಿರುಭೂಮಿ ಪ್ರತಿಷ್ಠಾನ ನೇತೃತ್ವದಲ್ಲಿ ರಚಿಸಲಾಗಿರುವ ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯನ್ನು ಆರಂಭಿಸಲಾಗಿದೆ. 213 ಎಕರೆ ವಿಸ್ತಿರ್ಣದ ಹುಣಸಿನಕೆರೆಯ ಸ್ವಚ್ಛತೆಯ ಕಾರ್ಯವನ್ನು ಆರಂಭಿಸ, ಶೇಕಡ 80 ರಷ್ಟು ಭಾಗವನ್ನು ಸ್ವಚ್ಛಗೊಳಿಸಲಾಗಿದೆ. ಮಹತ್ ಕಾರ್ಯಕ್ಕೆ ನಗರದ ನಾಗರೀಕರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಹಾಗೂ ಸಣ್ಣ ಮೀರಾವರಿ ಇಲಾಖೆಯವರಿಂದ ಹಣಕಾಸಿನ ನೆರವು ಒದಗಿಸಿದ್ದಾರೆ. ಸ್ವಚ್ಛತೆ ಮಾಡುವಲ್ಲಿ ಮೀನುಗಾರರು ಸಹಕರಸಿದ್ದಾರೆ. ರಾಜ್ಯ ಸರಕಾರವು ಹುಣಸಿನಕೆರೆ ಪುನಶ್ಚೇತನ, ಅಭಿವೃದ್ಧಿ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ರೂಪಿಸಲು 11 ಕೋಟಿ ರೂಗಳ ಯೋಜನೆಯನ್ನು ಸಿದ್ಧಗೊಳಿಸಿದ್ದು, ಅನುಷ್ಠಾನದ ಹಂತದಲ್ಲಿದೆ ಎಂದರು. ಎಲ್ಲರೂ ಕೈಜೋಡಿಸಿ ಹುಣಸಿನೆರೆಯನ್ನು ಸ್ವಚ್ಛ ಮಾಡಿ ಪರಿಸರ ಸುಂದರಗೊಳಿಸಲು ಕೋರಿದರು.

     ಪತ್ರಿಕಾಗೋಷ್ಠಿಯಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ಸಯ್ಯಾದ್ ಖಾನ್, ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ನಿರ್ದೇಶಕ ರಾಜೀವೆಗೌಡ ಇತರರು ಪಾಲ್ಗೊಂಡಿದ್ದರು. 


Post a Comment

Previous Post Next Post