ಸಚಿವ ಬಸವರಾಜ ಬೊಮ್ಮಾಯಿ ಅವರಿಂದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಉದ್ಘಾಟನೆ

 ಉತ್ತಮವಾಗಿರುವಂತಹ ಕಾನೂನು ಬದ್ದವಾದ ಒಂದು ಸಂಚಾರ ಸಂಸ್ಕøತಿ ಬೆಳಸಬೇಕು ಎಂಬ ಕರೆಯನ್ನು ಕನ್ನಡ ನಾಡಿನ ಜನತೆಗೆ ವಿಶೇಷವಾಗಿ ಬೆಂಗಳೂರಿನವರಿಗೆ ಕೊಡಲು ಇಚ್ಚೆ ಪಡುತ್ತೇನೆ ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಅವರು ತಿಳಿಸಿದರು.

    ಇಂದು ಸರ್ ಪುಟ್ಟಣ್ಣ ಚೆಟ್ಟಿ ಪÀರಭವನದಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಗೃಹ ಸಚಿವ ಬಸವರಾಜಬೊಮ್ಮಾಯಿ ಉದ್ಘಾಟಿಸಿ ಸುರಕ್ಷ ರಸ್ತೆ ಸಂಚಾರ-ಆ್ಯನಿಮೇಟೆಡ್ ಕಿರುಚಿತ್ರ ಬಿಡುಗಡೆ ಮಾಡಿದರು. ಕಿರುಚಿತ್ರವು ಸಂಚಾರ ಶಿಕ್ಷಣದ ಅರಿವನ್ನು ಮೂಡಿಸುವ ಕಿರುಚಿತ್ರವಾಗಿದೆ.
     ಸಚಿವರು ಮಾತನಾಡುತ್ತಾ  ಸಂಚಾರ ನಿಯಮ ಉಲ್ಲಂಘನೆ ಮಾಡುವ ಸಂಸ್ಕøತಿಯಿಂದ ಸಂಚಾರ ನಿಯಮ ಪಾಲನೆ ಮಾಡುವ ಸಂಸ್ಕøತಿಗೆ ನಾವು ಜನರನ್ನು ಬದಲಾವಣೆ ಮಾಡಿದಾಗ ಮಾತ್ರ ಒಂದು ಪರಿಪೂರ್ಣವಾದ ಒಂದು ಪರ್ಯಾಯವನ್ನು ರೂಪವನ್ನು  ಕೊಡಲು ಸಾಧ್ಯವೆಂದು ಅವರು ತಿಳಿಸಿದರು.
   
     ಜನಸಂದಣಿಗಿಂತ ಸಂಚಾರ ಹೆಚ್ಚಾಗಿದೆ. ಆದುದರಿಂದ ಆಧುನಿಕ ಟ್ರಾಫಿಕ್ ಯೋಜನೆಯಲ್ಲಿ ಬದಲಾವಣೆ ತರಬೇಕು.  ತಾಂತ್ರಜ್ಞಾನವು ಆರ್ಟಿಫಿಷಿಯಲ್ ಇನ್‍ಟೆಲಿಜೆನ್ಸ್ ಇರುವ ಸಿಗ್ನಲ್, ಕ್ಯಾಮೆರಾಗಳ ಮಹತ್ವದ ಪಾತ್ರವನ್ನು ವಹಿಸಿದೆ ಎಂದರು.
                                                                                                                                                                                                ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ  ಡಾ. ಅಶ್ವತ್ಥನಾರಾಯಣ “ಮೊಳಕೆಯಲ್ಲೇ ತಿದ್ದಿರಿ” ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಅಪಘಾತದಿಂದ ಸಾವು  ನೋವು ಹೆಚ್ಚಾಗುತ್ತಿದೆ. ಸುರಕ್ಷತೆಗೆ ಸವಾಲು ಇದೆ. ಸಮಾಜದ ಸಮಸ್ಯೆಗಳನ್ನು ಜಾಗೃತಿ ಮೂಲಕ ಸರಿಪಡಿಸಬಹುದು. ಶಿಕ್ಷಣ ಇಲಾಖೆಯು ಸಮಾಜದಲ್ಲಿ  ಸಂಚಾರ ನಿಯಮಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಡಬೇಕು. ಶಾಲಾ ಕಾಲೇಜುಗಳಲ್ಲಿ  ಸಂಚಾರÀ ನಿಯಮ ಪಾಲನೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
    ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ವiಹಾನಗರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು  “ರಸ್ತೆ ಸುರಕ್ಷತೆ” ಕೈಪಿಡಿ ಯನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯಕ್ತರಾದ ಕಮಲ್ ಪಂತ್ ಅವರು “ಅಪಘಾತ ವಿಮರ್ಶೆ”  ಒಂದು ಹಿನ್ನೋಟ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.
     ಸ್ವಾಗತ ಭಾಷಣ ಹಾಗೂ ಪ್ರಸ್ತಾವಿಕವಾಗಿ ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ ಅವರು ಮಾತನಾಡಿದರು.  
    ಕಾರ್ಯಕ್ರಮದಲ್ಲಿ ಚಿಕ್ಕಪೇಟೆ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಡಾ. ಉದಯ್ ಬಿ. ಗರುಡಾಚಾರ್ ಅವರು ಅಧ್ಯಕ್ಷತೆ ವಹಿಸಿದ್ದರು.ಬೃಹತ್ ಬೆಂಗಳೂರು ವiಹಾನಗರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತಾ, ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆಯುಕ್ತರಾದ ಪ್ರತಾಪ್ ರೆಡ್ಡಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಎನ್ ಶಿವಕುಮಾರ್, ಹಾಗೂ ಹಿರಿಯರು ಉಪಸ್ಥಿತರಿದ್ದರು.

Post a Comment

Previous Post Next Post