ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್‌ಸಿ ) 1112 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಭಾನುವಾರ ( ಜ .24 ರಂದು ) ಲಿಖಿತ ಪರೀಕ್ಷೆ ಅಯೋಜಿಸಿದ್ದು , ರಾಜ್ಯಾದ್ಯಾಂತ ಒಟ್ಟು 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ . ಹೈದರಾಬಾದ್ - ಕರ್ನಾಟಕ ಭಾಗದ 137 ಹಾಗೂ ಉಳಿದ 975 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ 2020 ರ ಜನವರಿ 31 ರಂದು ಅಧಿಸೂಚನೆ ಹೊರಡಿಸಿತ್ತು . ಈ ಹುದ್ದೆಗಳಿಗಾಗಿ ರಾಜ್ಯದಲ್ಲಿ ಒಟ್ಟು 3,74,124 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಕೆಪಿಎಸ್‌ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
Tags
ಉದ್ಯೋಗ