ಛಲ ಬಿಡದ ಶಾಸಕರು : ರೈಲ್ವೆ ಮೇಲು ಸೇತುವೆ ಕಾಮಗಾರಿಗೆ ಹಾದಿ ಸುಗಮ

ಹಾಸನ: ಎನ್.ಆರ್. ವೃತ್ತದಿಂದ ರೈಲ್ವೆ ಹಳಿವರೆಗೂ ಮೇಲು ಸೇತುವೆ ನಿರ್ಮಿಸುವುದಕ್ಕೆ ರಸ್ತೆ ವಿಶಾಲ ಮಾಡಲು ಜಾಗದ ವಿಚಾರವಾಗಿ ಗ್ರಹಣ ಹಿಡಿದಿತ್ತು. ಹಾಸನ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ ಛಲದಿಂದ ಕಾಮಗಾರಿ ಮಾಡಲು ಕೊನೆಗೂ ಹಾದಿ ಸುಗಮವಾಗಿದೆ.
​ ​ ​ ​ ​ ಎಷ್ಟೆ ಅಡೆ ತಡೆಗಳು ಕಾನೂನು ತೊಡಕುಗಳಿದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದರು. ಈವೇಳೆ ಮಾತುಕೇಳದ ಕೆಲವರಿಗೆ ತಿಳಿ ಮಾತು ಹೇಳಿ ಸರಿಪಡಿಸಿಕೊಂಡರು. ಮೇಲು ಸೇತುವೆ ಕಾಮಗಾರಿಗೆ ರಸ್ತೆ ಅಗಲಿಕರಣಕ್ಕೆ ಯಾರಾರು ಜಾಗ ಕೊಡದೆ ವಿರೋಧ ಮಾಡಿದ್ದರೂ ಅವರಿಗೆ ಬೇರೆ ನ್ಯೂನ್ಯತೆಗಳನ್ನು ಹಿಡಿದು ಗ್ರಹಣ ಹಿಡಿದಂತಹ ಮೇಲು ಸೇತುವೆ ಕಾಮಗಾರಿಗೆ ಇಂದು ಮುಕ್ತಿ ದೊರಕಿದಂತಾಗಿದೆ. ಕಳೆದ ಎರಡು ವರ್ಷಗಳಿಂದ ಕಾಮಗಾರಿಗೆ ಜಟಾಪಟಿ ನಡೆಯುತ್ತಿದ್ದು, ಆದರೇ ಕೊನೆಗೂ ಕಾಯಕಲ್ಪ ಕೂಡಿ ಬಂದೆದೆ. ಕಳೆದ ಎರಡು ದಿವಸಗಳಿಂದ ಮೇಲು ಸೇತುವೆ ಕಾಮಗಾರಿಗೆ ರಸ್ತೆ ಬದಿ ಇದ್ದ ಕಾಂಪೌಂಡ್ ಹೊಡೆಯುವ ಕೆಲಸ ಪ್ರಾರಂಭಿಸಿದ್ದಾರೆ. ಇನ್ನು ಕೆಲ ಮನೆ ಮಾಲೀಕರು ಸ್ವಯಂ ಪ್ರೇರಿತವಾಗಿ ಹೊಡೆದುಕೊಳ್ಳುವ ವಿಶ್ವಾಸವ್ಯಕ್ತಪಡಿಸಿದ್ದಾರೆ. ತೆರವುಗೊಂಡ ಕಟ್ಟಡಗಳಿಗೆ ಕಾನೂನು ಪ್ರಕಾರ ಪರಿಶೀಲಿಸಿ ಪರಿಹಾರ ಕೊಡುವ ಕೆಲಸ ಮಾಡುವುದಾಗಿ ಭರವಸೆ.

Post a Comment

Previous Post Next Post