ಹಾಸನ ಜ.13 :ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ –ಉಪಾದ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ನಿಗದಿಪಡಿಸಲು ಸಭೆಗೆ ದಿನಾಂಕ, ವೇಳೆ ಮತ್ತು ಸ್ಥಳ ಗೊತ್ತುಪಡಿಸಲಾಗಿದ್ದು ಜಿಲ್ಲೆಯ 266 ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಭೆಗೆ ಹಾಜರಾಗಲು ರಾಜ್ಯ ಪತ್ರದಂತೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿಲ್ಲಾ ಚುನಾವಣಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜ.15 ರಂದು ಬೆಳಿಗ್ಗೆ 10.30 ಗಂಟೆಗೆ ಆಲೂರು ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಮತ್ತು ಮದ್ಯಾಹ್ನ 3 ಗಂಟೆಗೆ ಹಾಸನ ತಾಲ್ಲೂಕಿನ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಭೆ ನಡೆಯಲಿದೆ.
ಜ.16 ರಂದು ಬೆಳಿಗ್ಗೆ 10.30 ಗಂಟೆಗೆ ಅರಕಲಗೂಡು ಡಿ.ಕೆ ಕನ್ವೆಷನ್ ಹಾಲ್ ಮತ್ತು ಮದ್ಯಾಹ್ನ 3 ಗಂಟೆಗೆ ಸಕಲೆಶಪುರದ ಪುರಸಭೆ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಜ.18 ರಂದು ಬೆಳಿಗ್ಗೆ9.30 ಗಂಟೆಗೆ ಚನ್ನರಾಯಪಟ್ಟಣ ಗಾಯಿತ್ರಿ ಚಿತ್ರಮಂದಿರದಲ್ಲಿ ಮತ್ತು ಮದ್ಯಾಹ್ನ 3 ಗಂಟೆಗೆ ಹೊಳೆನರಸೀಪುರ ಶಿಕ್ಷಕರ ಭವನದಲ್ಲಿ ಗೊತ್ತುಪಡಿಸಲಾಗಿದೆ.
ಜ.21 ರಂದು ಬೆಳಿಗ್ಗೆ 9.30 ಗಂಟೆಗೆ ಬೇಲೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮತ್ತು ಮದ್ಯಾಹ್ನ 3 ಗಂಟೆಗೆ ಅರಸೀಕೆರೆ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸಭೆ ನಿಗದಿಪಡಿಸಲಾಗಿದೆ.
ಜಿಲ್ಲೆಯ 266 ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಪ್ರ ವರ್ಗವರು ಮೀಸಲಾತಿಯ ಅಡಿಯಲ್ಲಿ ತಾಲ್ಲೂಕುವಾರು ವಿವರ (ಆವರಣದಲ್ಲಿರುವುದು ಮಹಿಳಾ ಪ್ರವರ್ಗದ ಸಂಖ್ಯೆಯಾಗಿದೆ.) ಆಲೂರು ತಾಲ್ಲೂಕಿನ ಒಟ್ಟು ಗ್ರಾ ಪಂ. ಹುದ್ದೆಗಳ ಸಂಖ್ಯೆ 15(8), ಅನೂಸೂಚಿತ ಜಾತಿ 4(2), ಅನುಸೂಚಿತ ಪಂಗಡ 0(0), ಹಿಂದುಳಿದ ‘ಅ’ ವರ್ಗ 2(2), ಹಿಂದುಳಿದ ಬ ವರ್ಗ 1(0), ಸಾಮಾನ್ಯ 8(4).
ಅರಕಲಗೂಡು ತಾಲ್ಲೂಕಿನ ಒಟ್ಟು ಗ್ರಾ.ಪಂ ಹುದ್ದೆಗಳ ಸಂಖ್ಯೆ 36(18), ಅನುಸೂಚಿತ ಜಾತಿ 6(3), ಅನುಸೂಚಿತ ಪಂಗಡ 0(0), ಹಿಂದುಳಿದ ‘ಅ’ ವರ್ಗ 10(5) ಹಿಂದುಳಿದ ‘ಬ’ ವರ್ಗ 2(1) ಸಾಮಾನ್ಯ 18(9).
ಅರಸೀಕೆರೆ ಒಟ್ಟು ಗ್ರಾ.ಪಂ ಸಂಖ್ಯೆ 45(23), ಅನೂಸೂಚಿತ ಜಾತಿ 9(5), ಅನುಸೂಚಿತ ಪಂಗಡ 1(1), ಹಿಂದುಳಿದ ‘ಅ’ ವರ್ಗ 10(5) ಹಿಂದುಳಿದ ‘ಬ’ ವರ್ಗ 2(1), ಸಾಮಾನ್ಯ 23(11). ಬೇಲೂರು ಒಟ್ಟು ಗ್ರಾ.ಪಂ ಹುದ್ದೆಗಳ ಸಂಖ್ಯೆ 37(19), ಅನೂಸೂಚಿತ ಜಾತಿ 9(5), ಅನುಸೂಚಿತ ಪಂಗಡ 1(1), ಹಿಂದುಳಿದ ‘ಅ’ ವರ್ಗ 6(3) ಹಿಂದುಳಿದ ‘ಬ’ ವರ್ಗ 2(1), ಸಾಮಾನ್ಯ 19(9)
ಚನ್ನರಾಯಪಟ್ಟಣ ಒಟ್ಟು ಗ್ರಾ.ಪಂ ಹುದ್ದೆಗಳ ಸಂಖ್ಯೆ 41(21), ಅನೂಸೂಚಿತ ಜಾತಿ 4(2), ಅನುಸೂಚಿತ ಪಂಗಡ 0(0), ಹಿಂದುಳಿದ ‘ಅ’ ವರ್ಗ 11(6), ಹಿಂದುಳಿದ ‘ಬ’ ವರ್ಗ 3(1), ಸಾಮಾನ್ಯ 23(12).
ಹಾಸನ ಒಟ್ಟು ಗ್ರಾ.ಪಂ ಹುದ್ದೆಗಳ ಸಂಖ್ಯೆ 38(19), ಅನುಸೂಚಿತ ಜಾತಿ 6(3), ಅನಸೂಚಿತ ಪಂಗಡ 1(1), ಹಿಂದುಳಿದ ‘ಅ’ ವರ್ಗ 10(5), ಹಿಂದುಳಿದ ‘ಬ’ ವರ್ಗ 2(1), ಸಾಮಾನ್ಯ 19(9).
ಹೊಳೆನರಸೀಪುರ ಒಟ್ಟು ಗ್ರಾ.ಪಂ ಹುದ್ದೆಗಳ ಸಂಖ್ಯೆ 26(13), ಅನುಸೂಚಿತ ಜಾತಿ 5(3), ಅನುಸೂಚಿತ ಪಂಗಡ 1(1), ಹಿಂದುಳಿದ ‘ಅ’ ವರ್ಗ 6(3), ಹಿಂದುಳಿದ ‘ಬ’ ವರ್ಗ 1(1), ಸಾಮಾನ್ಯ 13(5).
ಸಕಲೇಶಪುರ ಒಟ್ಟು ಗ್ರಾ.ಪಂ ಹುದ್ದೆಗಳು 26(13) ಅನುಸೂಚಿತ ಜಾತಿ6(3), ಅನುಸೂಚಿತ ಪಂಗಡ 0(0), ಹಿಂದುಳಿದ ‘ಅ’ ವರ್ಗ 6(3) ಹಿಂದುಳಿದ ‘ಬ’ ವರ್ಗ 1(1), ಸಾಮಾನ್ಯ 13(6). ಹಿಂದಿನ ಎಲ್ಲಾ 8 ಅವಧಿಗಳ ಮೀಸಲಾತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಸ್ತುತ ಸಾಲಿನಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲದಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಎನ್.ಐ. ಸಿ. ತಂತ್ರಾಂಶದ ಮೂಲಕ ಈ ಪ್ರಕ್ರಿಯೆಯನ್ನು ಆಯ್ಕೆಯಾದ ಎಲ್ಲಾ ಜನ ಪ್ರತಿನಿಧಿಗಳ ಸಮಕ್ಷಮ ಪಾರದರ್ಶಕವಾಗಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.
Tags
ಹಾಸನ