ಕಸ ವಿಲೇವಾರಿ ಮಾಡುವ ಅಟೋ ಟಿಪ್ಪರ್‍ಗೆ ಚಾಲನೆ

 ರಾಮನಾಥಪುರ;- ಸ್ವಚ್ಚ ಭಾರತ ಮೀಷನ್ ಘನ ತ್ಯಾಜ್ಯ ಸೂಕ್ತವಾಗಿ ವಿಲೇವಾರಿ ಮಾಡಲು ಕಸ ವಿಲೇವಾರಿ ಘಟಕದ ಅಭಿವೃದ್ದಿಗಾಗಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಕ್ರೀಯಾ ಯೋಜನೆ ಈಗಾಗಲೇ ತಯಾರಿಸಿಲಾಗಿದೆ ಎಂದು ಗಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.ಇ. ವಿಜಯಕುಮಾರ್ ತಿಳಿಸಿದರು.                                                                        

ರಾಮನಾಥಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಅಟೋ ಟಿಪ್ಪರ್‍ಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ರಾಮನಕೊಪ್ಪಲು ಗ್ರಾಮದ ಸಮೀಪ ಹೊರವಲಯದಲ್ಲಿರುವ ಸ.ನಂ. 119 ರಲ್ಲಿ 4 ಎಕರೆ ಪ್ರದೇಶವನ್ನು ಘನ, ದ್ರವತ್ಯಾಜ್ಯ ಸಂಪಮೂಲ ವಿಲೇವರಿ ಘಟಕ ನಿರ್ಮಾಣಕ್ಕಾಗಿ ಈಗಾಗಲೇ ಹಾಸನ ಜಿಲ್ಲಾಧಿಕಾರಿಗಳವರಿಂದ ಜಾಗ ಮಂಜೂರಾತಿಯಾಗಿದೆ ಎಂದರು.



ಸದರಿ ಜಾಗವನ್ನು ಗ್ರಾಮ ಪಂಚಾಯಿತಿ ಅಡಳಿತಾಧಿಕಾರಿ ಹಾಗೂ ತಹಸಿಲ್ದಾರ್ ವೈ.ಎಂ. ರೇಣುಕುಮಾರ್À ರವರ ಉಪಸ್ಥಿತಿಯಲ್ಲಿ ಸರ್ವ ಮಾಡಿಸಿ, 4 ಎಕರೆ ಪ್ರದೇಶದ ಜಾಗದ ಸುತ್ತ ಕಾಲುವೆ ನಿರ್ಮಿಸಿ, ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ಪಡೆದು ಈ ಜಾಗವನ್ನು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.  

 ಕಸ ಸಾಗಣೆ;- ಗ್ರಾಮ ಪಂಚಾಯಿತಿವತಿಯಿಂದ ಪಟ್ಟಣದ ವಾರ್ಡ್‍ಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 8 ರ ನಂತರ ತಮ್ಮ ಮನೆಯ ಹತ್ತಿರ ಗೂಡ್ಸ್ ಅಟೋ ಬರಲಿದ್ದು ಒಣ ಕಸವನ್ನು ಹಾಕುವಂತೆ ಮನವಿ ಮಾಡಿದ ಅವರು ಪ್ರತಿ ಮನೆಯ ಮತ್ತು ರಸ್ತೆ ಬದಿಗಳ ಕಸವನ್ನು ವೈಜಾನಿಕ ರೀತಿ ಕಸ ವಿಂಗಡಿಸಿ, ವಿಲೇವಾರಿ ಮಾಡಲಾಗುವುದು ಎಂದರು. 

ಈಗಾಗಲೇ ಗ್ರಾಮ ಪಂಚಾಯಿತಿವತಿಯಿಂದ 3 ಲಕ್ಷ 50 ಸಾವಿರ ರೂ ವೆಚ್ಚದಲ್ಲಿ ಅಟೋ ಟೀಪ್ಪರ್ ಖರುದಿಸಲಾಗಿದೆ. ಒಣ ಕಸ ಸಂಗ್ರಹಿಸಲು ಸಾವಿರ ಕುಟುಂಭಗಳಿಗೆ ಉಚಿತವಾಗಿ ಮನೆ-ಮನೆಗಳಿಗೆ ಕಸದ ಬುಟ್ಟಿಗಳನ್ನು ನೀಡಲಾಗಿದೆ. ತಮ್ಮ-ತಮ್ಮ ಮನೆಯ ಹತ್ತಿರ ಅಟೋ ಟಿಪ್ಪರ್ ಬರುತ್ತದೆ. ತಾವು ಸಂಗ್ರಹಿಸುವ ತ್ಯಾಜ್ಯ ವಿಲೇವಾರಿ ಮಾಡಿ ಹಸಿ-ಮತ್ತು ಒಣ ಕಸವನ್ನು ಪ್ರತ್ಯೇಕ್ಷಿಸಿ ಹಾಕುವಂತೆ ಮನವಿ ಮಾಡಿದರು. 

 ಪ್ಲಾಸ್ಟಿಕ್ ಮುಕ್ತ- ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ, ಕಾವೇರಿ ನದಿಯ ಸ್ವಚ್ಚತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇದವನ್ನು ಕಟ್ಟುನಿಟ್ಟಾಗಿ ತರಲಾಗುವುದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನದ ವಸ್ತುಗಳನ್ನು ಧೂಮಪಾನ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುಲು ಜಾಗೃತಿ ಮೂಡಿಸಲು ತಾಲ್ಲೂಕು  ತಾಹಸಿಲ್ದಾರ್ ವೈ.ಎಂ. ರೇಣುಕುಮಾರ್ ಅವರ ನೇತೃತ್ವದಲ್ಲಿ ಶ್ರೀಘವೇ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಅತಿಮುಖ್ಯವಾಗಿ ಪೊಲಿಸ್ ಇಲಾಖೆ ಅವರನ್ನು ಈ ಸಭೆಗೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು

ಪ್ಲಾಸ್ಟಿಕ್ ಬಳಕೆ ನಿಷೇಧ;-  ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಗಳು ದಿನೆ ದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಅರಿವು ಮೂಡಿಸುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿವತಿಯಿಂದ ಈಗಾಗಲೇ ಅನೇಕ ಭಾರಿ ಅಂದೋಲನಾ ಮಾಡಿ ಎಚ್ಚರಿಕೆ ನೀಡಲಾಗಿದೆ. ತಮ್ಮ-ತಮ್ಮ ಮನೆಗಳಿಂದ ಬರುವ ಅನೇಕ ಪದಾರ್ಥಗಳು ಕಸದ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಯಾವುದೇ ಬೇಡವಾದ ವಸ್ತುಗಳನ್ನು ಕಸಕ್ಕೆ ಎಸೆಯುವ ಮೊದಲು ಸಾಧ್ಯವದಷ್ಟು ಮರು ಬಳಕೆ ಮಾಡಲು ಯತ್ನಿಸಬೇಕು,   ಅಂಗಡಿಗಳಲ್ಲಿ ಸಾಮಾನುಗಳನ್ನು ಖರೀದಿಸಲು ಬಟ್ಟೆಯ ಹಾಗೂ ನೈಲಾನ್ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗುವುದರ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಪಟ್ಟಣದಲ್ಲಿ ಇತ್ತೀಚಗೆ ಕೆಲವು ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಪ್ಯಾಕುಗಳನ್ನು ವಶಕ್ಕೆ ಪಡೆಯಲಾಗಿದೆ. ಅಂಗಡಿಗಳ ಮುಂದೆ ಬೀಡಿ ಸಿಗರೇಟುಗಳನ್ನು ಸೇದಿ ಎಸೆದಿದ್ದ ತುಂಡುಗಳನ್ನು ನೋಡಿ ಅಂಗಡಿ ಮಾಲೀಕರುಗಳಿಗೆ ಎಚ್ಚರಿಕೆ ನೀಡಿದ್ದರೂ ಸಹ ಇಂದು ನಾವು ಕೆಲವು ಸಗಟು ವ್ಯಾಪಾರಗಾರರ ಅಂಗಡಿಗಳಿಗೆ ಭೇಟಿ ನೀಡಿ ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡು ದಂದ ವಿದಿಸಿದ್ದರೂ ಕೂಡ ಈ ರೀತಿ ವಹಿವಾಟು ನಡೆಸುತ್ತಿದ್ದಾರೆ ಇಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಕುಮಾರ್ ತಿಳಿಸಿದರು.  ಗಾಮ ಪಂಚಾಯಿತಿ ಕಾರ್ಯದರ್ಶಿ ಎಚ್.ಸಿ. ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.


Post a Comment

Previous Post Next Post