ಹಾಸನ: ಮಲೆನಾಡು ಎಜುಕೇಶನ್ ಸೊಸೈಟಿಯಲ್ಲಿ ನಡೆದಿರುವ ಹಗರಣವನ್ನು ಪರಿಶೀಲಿಸಿ ನ್ಯಾಯಕೊಡಿಸುವಂತೆ ಹಾಸನದ ಕುವೆಂಪು ನಗರದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಗೆ ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ನೇತೃತ್ವದಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಹಗರಣದ ವಿಚಾರ ನ್ಯಾಯಕ್ಕಾಗಿ ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವು ತೀವ್ರಗೊಂಡಿದ್ದು, ಗುರುವಾರ ಬೆಳಿಗ್ಗೆ ನಗರದಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಗೆ ವಕೀಲರ ಜೊತೆ ತೆರಳಿ ಮನವಿ ಸಲ್ಲಿಸಲಾಯಿತು.
ನಂತರ ವಕೀಲರು ಹಾಗೂ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಮತ್ತು ಮಹಮದ್ ಇಮ್ರಾನ್ ಅಹಮದ್ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಲೆನಾಡು ಎಜುಕೇಶನ್ ಸೊಸೈಟಿ ಹಗರಣದ ಬಗ್ಗೆ ಬಿ.ಕೆ. ಮಂಜುನಾಥ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಹಗರಣಗಳ ಬಗ್ಗೆ ದಾಖಲೆ ಸಮೇತವಾಗಿ ದೂರು ಕೊಡಲಾಗಿದೆ. ಹಗರಣ ಆಗಿರುವುದರಿಂದ ಹಾಸನದ ಜನತೆಗೆ ಜಸ್ಟಿಸ್ ಬೇಕು, ಡೆಮಾಕ್ರಸಿ ಉಳಿಯಬೇಕು, ಸಂವಿಧಾನ ಉಳಿಸಬೇಕು ಹಾಗೂ ಜನರಿಗೆ ನ್ಯಾಯ ಸಿಗಬೇಕು ನಿಟ್ಟಿನಲ್ಲಿ ದೂರು ಕೊಡಲಾಗುತ್ತಿದೆ. ನ್ಯಾಯ ಸಿಗುವವರಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. 2021 ಜನವರಿ 7ಕ್ಕೆ ದಿನಾಂಕ ಕೊಡಲಾಗಿದ್ದು, ಅಧಿಕಾರಿಗಳು ಡಿ.ಆರ್. ರವರು ನಾನು ಇರುವುದಿಲ್ಲ, ಸುನೀಲ್ ಎಂಬುವರಿಗೆ ಎಲ್ಲಾ ದಾಖಲೆಯನ್ನು ನೀಡುವಂತೆ ಹೇಳಿದ್ದು, ದುರಂತ ಎಂದರೇ ನಾವುಗಳು ಇಂದು ಗುರುವಾರ ಬೆಳಿಗ್ಗೆ 10:30ಕ್ಕೆ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಗೆ ಬಂದರೇ ಸುನೀಲ್ ಎನ್ನುವ ಅಧಿಕಾರಿ 11:30ರ ವರೆಗೂ ಬರಲೆ ಇಲ್ಲ. ನಂತರ ಕಛೇರಿಯಲ್ಲಿದ್ದ ವಸೀಮ್ ಎಂಬುವರು ನಮ್ಮ ದೂರನ್ನು ಸ್ವೀಕರಿಸಿದರು. ಮೇಲೆ ಗೊಂಬೆ ಆಡಿಸಿದಂತೆ ಇಲ್ಲಿನ ಜನರಿಗೆ ಅಶೋಕ್ ಹಾರನಹಳ್ಳಿಯವರು ಆಟಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಗರಣವನ್ನು ನಾವು ತುಂಬ ಗಂಭೀರವಾಗಿ ತೆಗೆದುಕೊಂಡಿದ್ದು, ಹೋರಾಟದಲ್ಲಿ ಯಾವ ಒಪ್ಪಂದಕ್ಕೆ ಬರುವುದಿಲ್ಲ. ಗೆಲ್ಲುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು. ಅಮಯಕರಾದ ಆರ್.ಟಿ. ದ್ಯಾವೇಗೌಡರನ್ನು ಇಟ್ಟುಕೊಂಡು ಅಶೋಕ್ ಹಾರನಹಳ್ಳಿ ಆಟವಾಡುತ್ತಿರುವುದನ್ನು ನೋಡಿ ನಮಗೆ ದುಃಖವಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಜನರು-ಜನರಿಗೆ ಎತ್ತಿಕಟ್ಟಿ ಹೊಡೆದಾಡಿಸಿ ರಕ್ತಪಾತ ಮಾಡಲು ಹೊರಟಿದ್ದಾರೆ ಅದು ಕೂಡಲೇ ನಿಲ್ಲಬೇಕು ಎಂದು ಒತ್ತಾಯಿಸಿದರು. ಮಲೆನಾಡು ಎಜುಕೇಶನ್ ಸೊಸೈಟಿಯ ಲೆಕ್ಕ ಪತ್ರವನ್ನು ಕೊಡಬೇಕು. ಈ ಸೊಸೈಟಿಯನ್ನು ರಿನಿವಲ್ ಮಾಡಿರುವುದಿಲ್ಲ. ಮುಂದೆನು ಮಾಡುವುದಿಲ್ಲ. ಮುಂದೆ ಯಾವ ತೀರ್ಮಾನಗಳು ಆಗುವುದಿಲ್ಲ ಎಂದರೇ ಬೇರೆ ರೀತಿ ತೀವ್ರವಾದ ಹೋರಾಟಗಳು ಪ್ರಾರಂಭವಾಗುತ್ತದೆ ಎಂದರು.
ಇದೆ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್, ಹಿರಿಯ ವಕಿಲರಾದ ಗೋಪಾಲ್, ಮೂರ್ತಿ, ಹೇಮಾವತಿ, ಲೋಕೇಶ್, ಲಕ್ಷ್ಮೇಗೌಡ, ರಂಗೇಗೌಡ, ಇತರರು ಪಾಲ್ಗೊಂಡಿದ್ದರು.