ಎಸ್.ಡಿ.ಎಂ. ನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ನವೀಕೃತಗೊಂಡ ಆಸ್ಪತ್ರೆ ಉದ್ಘಾಟನೆ

“ಎಸ್.ಡಿ.ಎಂ. ನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ -“ಶರಾಯು”, ಪುಸ್ತಕ ಬಿಡುಗಡೆ ಹಾಗು ನವೀಕೃತಗೊಂಡ ಆಸ್ಪತ್ರೆ ವಿಭಾಗದ ಉದ್ಘಾಟನೆ”
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವದ ಸುಸಂದರ್ಭದಲ್ಲಿ  ಬೆಂಗಳೂರು, ಹಾಸನ & ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ & ಆಸ್ಪತ್ರೆಗಳು, ಕರ್ನಾಟಕ ರಾಜ್ಯದ ಆಯುರ್ವೇದ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಒಕ್ಕೂಟದ ಹಾಸನ ವಲಯ, ರಾಷ್ಟ್ರೀಯ ಸುಶೃತ ಸಂಘಟನೆಯ ಕರ್ನಾಟಕ ಘಟಕಗಳ ಸಹಯೋಗದೊಂದಿಗೆ ಜನವರಿ 8 ರ ಶುಕ್ರವಾರದಂದು ಹಾಸನದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನಲ್ಲಿ ತ್ರಿವಳಿ ಕಾರ್ಯಕ್ರಮಗಳನ್ನು ಒಂದೇ ದಿನ ಏರ್ಪಡಿಸಿವೆ. ಆರು ಅನುಭವಿ ಆಯುರ್ವೇದ ವೈದ್ಯರಿಂದ ‘ಶರಾಯು’ ಎಂಬ ಶೀರ್ಷಿಕೆ ಅಡಿಯಲ್ಲಿ ಶಾರಂಗಧರ ಸಂಹಿತೆ ಕುರಿತಾದ ಅತಿಥಿ ಉಪನ್ಯಾಸ & ಸಂವಾದ ಒಳಗೊಂಡ ವಿಚಾರ ಸಂಕಿರಣ, ನವದೆಹಲಿಯ ಪ್ರಖ್ಯಾತ ಆಯುರ್ವೇದ ತಜ್ಞ ಡಾ. ಶ್ರೀರಾಮ್.ಎಸ್. ಸಾವ್ರೀಕರ್ ವಿರಚಿತ “ಶಾರಂಗಧರ ಸಂಹಿತೆ” ಎಂಬ ಸಂಸ್ಕøತ ಗ್ರಂಥದ ಆಂಗ್ಲ ಭಾಷಾಂತರದ ಪುಸ್ತಕ ಬಿಡುಗಡೆ, ಹಾಗು ಇತ್ತೀಚಿಗೆ ನವೀಕೃತಗೊಂಡ ಆಸ್ಪತ್ರೆಯ ಒಳರೋಗಿ ವಿಭಾಗದ ಉದ್ಘಾಟನೆಗಳೇ ಈ ಮೂರು ಕಾರ್ಯಕ್ರಮಗಳು. 
ರಾಷ್ಟ್ರಮಟ್ಟದ ವಿಚಾರ ಸಂಕಿರಣ “ಶರಾಯು” :
 ( ಉದ್ಘಾಟನಾ ಸಮಾರಂಭ )  ಬೆಳಿಗ್ಗೆ 9 ಗಂಟೆಗೆ ಈ ಒಂದು ದಿನದ ವಿಚಾರ ಸಂಕಿರಣವನ್ನು ಭಾರತ ಸರಕಾರದ ಆಯುಷ್ ಸಚಿವಾಲಯದ ಕಾರ್ಯದರ್ಶಿಗಳಾದ ಪದ್ಮಶ್ರೀ ಪುರಸ್ಕøತ ವೈದ್ಯ ರಾಜೇಶ್ ಕೊಟೆಚಾ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಆಯುಷ್ ನಿರ್ದೇಶನಾಲಯದ ಆಯುಕ್ತರಾದ ಶ್ರೀಮತಿ.ಮೀನಾಕ್ಷಿ ನೇಗಿ, ನವದೆಹಲಿಯ ಖ್ಯಾತ ಆಯುರ್ವೇದ ತಜ್ಞ & ಲೇಖಕ ಡಾ. ಶ್ರೀರಾಮ್.ಎಸ್. ಸಾವ್ರೀಕರ್, ಮುಂಬೈ ನ ಶ್ರೀ ಧೂತಪಾಪೇಶ್ವರ ಸಂಸ್ಥೆಯ ಮುಖ್ಯಸ್ಥರಾದ ಶ್ರೀ.ರಂಜಿತ್.ಪುರಾಣಿಕ್, ಪದ್ಮಶ್ರೀ ಪುರಸ್ಕøತರಾದ ಗುಜರಾತಿನ ಜಾಮನಗರ ಆಯುರ್ವೇದ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ.ಗುರುದೀಪ್ ಸಿಂಗ್ ಅವರು ಭಾಗವಹಿಸಲಿದ್ದು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಸಚ್ಚಿದಾನಂದ್ ಅವರು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಶರಾಯು: ವಿಚಾರ ಸಂಕಿರಣ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರ ವರೆಗೆ ಜರುಗುವ ಈ ವಿಚಾರ ಸಂಕಿರಣದಲ್ಲಿ ಒಟ್ಟು 6 ಅನುಭವಿ ವೈದ್ಯರಾದ ಬೆಂಗಳೂರಿನ ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಅಹಲ್ಯಾ.ಶರ್ಮಾ, ಕೇರಳದ ಕಣ್ಣೂರಿನ ಖ್ಯಾತ ಸರಕಾರಿ ಆಯುರ್ವೇದ ವೈದ್ಯಾಧಿಕಾರಿ ಡಾ. ಗೋಪಕುಮಾರ್.ಎಸ್, ಹಾಸನದ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಗೋವಿಂದ್.ಶರ್ಮಾ, ಮೈಸೂರಿನ ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಅಶೋಕ್. ಸಾತ್ಪುತೆ, ನವದೆಹಲಿಯ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯ ಪ್ರೊ. ಶ್ರೀನಿವಾಸ್..ಹೆeಮಾಡಿ.ಆಚಾರ್ಯ ಹಾಗು ಹಾಸನದ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರಸನ್ನ ನರಸಿಂಹ ರಾವ್ ಅವರುಗಳು ಶಾರಂಗಧರ ಸಂಹಿತಾ ಗ್ರಂಥದ ಉಪಯುಕ್ತ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವರು. ಈ ವಿಶೇಷ ವಿಚಾರ ಸಂಕಿರಣದಲ್ಲಿ ರಾಜ್ಯದ ನಾನಾ ಭಾಗಗಳಿಂದ ಪೂರ್ವ ನೋಂದಿತ ಆಯುರ್ವೇದ ಪ್ರಾಧ್ಯಾಪಕರು & ವೈದ್ಯಾಧಿಕಾರಿಗಳು ಭಾಗವಹಿಸಿ ಪ್ರಯೋಜನ ಪಡೆಯಲಿದ್ದಾರೆ.
ಪುಸ್ತಕ ಬಿಡುಗಡೆ: ಶಾರಂಗಧರ ಸಂಹಿತೆಯು ಸಂಸ್ಕøತ ಭಾಷೆಯಲ್ಲಿ ರಚಿಸಲ್ಪಟ್ಟ 13 ನೇ ಶತಮಾನದ ಆಯುರ್ವೇದದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ. ಈ ಗ್ರಂಥದ ಮೂರು  ಭಾಗಗಳಾದ ಪ್ರಥಮ, ಮಧ್ಯಮ & ಉತ್ತರ ಖಂಡಗಳÀನ್ನು ಡಾ. ಶ್ರೀರಾಮ್.ಎಸ್. ಸಾವ್ರೀಕರ್ ಟೀಕೆ & ವಿಮರ್ಶೆ ಸಹಿತವಾಗಿ ಆಂಗ್ಲಭಾಷೆಗೆ ತರ್ಜುಮೆ ಮಾಡಿದ್ದು, ದೆಹಲಿಯ ಚೌಕಾಂಬ ಪ್ರತಿಷ್ಠಾನ ಪ್ರಕಟಿಸಿದೆ. ಈ ಅತ್ಯುಪಯುಕ್ತವಾದ ಪುಸ್ತಕವನ್ನು ಆಯುರ್ವೇದ ಜಿಜ್ಞಾಸುಗಳ ಸದ್ಬಳಕೆಗಾಗಿ ಹಾಸನದಲ್ಲಿ ಕೇಂದ್ರ ಸರ್ಕಾರದ ರಾಜ್ಯ ರಕ್ಷಣಾ ಸಚಿವರೂ ಮತ್ತು ಆಯುಷ್ ಸಚಿವಾಲಯದ ರಾಜ್ಯ ಸ್ವತಂತ್ರ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರಿಂದ ಸಂಜೆ 4 ಗಂಟೆಗೆ ಬಿಡುಗಡೆ ಆಗಲಿದೆ. 
ನವೀಕೃತಗೊಂಡ ಆಸ್ಪತ್ರೆ ವಿಭಾಗದ ಉದ್ಘಾಟನೆ : ಇತ್ತೀಚಿಗೆ ನವೀಕೃತಗೊಂಡ ಆಸ್ಪತ್ರೆಯ ಒಳರೋಗಿ ವಿಭಾಗದ ವಿವಿಧ ಸೇವಾ ವಿಭಾಗಗಳನ್ನು ಮಧ್ಯಾಹ್ನ 3.30 ಕ್ಕೆ  ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಿದ್ದಾರೆ.
ಸಮಾರೋಪ ಸಮಾರಂಭ: ಸಂಜೆ 4 ರಿಂದ ನಡೆಯುವ ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ಶ್ರೀಕ್ಷೇತ್ರ ಧವರ್iಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ಹಾಸನದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರೀತಮ್.ಜೆ.ಗೌಡ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಸಚ್ಚಿದಾನಂದ್, ಕರ್ನಾಟಕ ಸರಕಾರದ ಆಯುಷ್ ನಿರ್ದೇಶನಾಲಯದ ಆಯುಕ್ತರಾದ ಶ್ರೀಮತಿ.ಮೀನಾಕ್ಷಿ ನೇಗಿ, ಖ್ಯಾತ ಆಯುರ್ವೇದ ತಜ್ಞ & ಲೇಖಕ ಡಾ. ಶ್ರೀರಾಮ್.ಎಸ್. ಸಾವ್ರೀಕರ್ ಭಾಗವಹಿಸುವರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ.ಡಿ.ಸುರೇಂದ್ರ ಕುಮಾರ್ ಹಾಗು ಯೋಜನಾ ನಿರ್ದೇಶಕರಾಗಿರುವ ಶ್ರೀ.ಡಿ.ಶ್ರೇಯಸ್.ಕುಮಾರ್ ಅವರು ಉಪಸ್ಥಿತರಿರುವರು. 
ಹಾಸನದ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರೂ ಹಾಗು ಈ ಎಲ್ಲ ಕಾರ್ಯಕ್ರಮಗಳ ಸಮಿತಿಗಳ ಮುಖ್ಯಸ್ಥರಾಗಿರುವ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಕೋವಿಡ್ ಜಾಗೃತಿಯನ್ನು ಸಂಪೂರ್ಣವಾಗಿ ಪಾಲಿಸಿ ಈ ಕಾರ್ಯಕ್ರಮ ನಡೆಯಲಿದೆ. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಹಾಸನ & ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ & ಆಸ್ಪತ್ರೆಗಳು, ಕರ್ನಾಟಕ ರಾಜ್ಯದ ಆಯುರ್ವೇದ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಒಕ್ಕೂಟದ ಹಾಸನ ವಲಯ & ರಾಷ್ಟ್ರೀಯ ಸುಶೃತ ಸಂಘಟನೆಯ ಕರ್ನಾಟಕ ಘಟಕಗಳ ಸಹಯೋಗದೊಂದಿಗೆ ಈ ಸರಳ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ತಿಳಿಸಿದರು.

Post a Comment

Previous Post Next Post