ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

 ಹಾಸನ.ಜ.11:- ಚನ್ನರಾಯಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು  ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ದೊಡೇರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆ  ತುಪ್ಪದಹಳ್ಳಿ, ಚಿಕ್ಕಗೊಂಡನಹಳ್ಳಿ,  ಚನ್ನೇನಹಳ್ಳಿ, ಎಂ.ಕಾಮನWಟ್ಟ, ಕೆಂಪಿನಕೋಟೆ, ಬೆಲಸಿಂದ, ಹುಲ್ಲೇನಹಳ್ಳಿ, ಹುಲಿಕೆರೆ, ಡಿ.ಕಾಳೇನಹಳ್ಳಿ ,ಊಪ್ಪಿನಹಳ್ಳಿ, ಶಿವಪುರ ಅಂಗನವಾಡಿ ಕೇಂದ್ರಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಜ 30. ರಂದು ಸಂಜೆ 5.30 ಗಂಟೆಯೊಳಗಾಗಿ ಅನ್ ಲೈನ್ ವೆಬ್ ಸೈಟ್‍ವಿಳಾಸ www.anganawadirecruit.kar.nic.in  ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

Post a Comment

Previous Post Next Post