ದರೋಡೆಗೆ ಒಳಗಾದ ವ್ಯಕ್ತಿಯ ದೂರು ಸ್ವಿಕರಿಸದ ಅರೋಪ ನಾಲ್ವರು ಪೋಲಿಸರ ಸಸ್ಪೆಂಡ್


ಕೇರಳದಿಂದ ಕಾರ್ಯನಿಮಿತ್ತ ವಾರದ ಹಿಂದೆ ಹಾಸನನಗರಕ್ಕೆ ಬಂದು ರೈಲ್ವೆ ನಿಲ್ದಾಣ ಸಮೀಪ ರೈಲ್ವೆ ಹಳಿಯ ಮೇಲೆ ನಡೆದುಹೋಗುತ್ತಿದ್ದ ಕೇರಳದ ಪೋಲಿಸ್ ಸಿಬ್ಬಂದಿಯೊಬ್ಬರನ್ನು ಬೆದರಿಸಿ ಹಣ ಹಾಗೂ ಆತನ ಬಳಿ ಇದ್ದ ಮೊಬೈಲ್ ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಹಾಸನ ನಗರ ಠಾಣೆಯ ಇಬ್ಬರು ಹಾಗೂ ಬಡಾವಣೆ ಠಾಣೆಯ ಇಬ್ಬರು ಸೇರಿ ನಾಲ್ಕು ಕಾನ್ಸ್‌ಸ್ಟೇಬಲ್ ಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ನಾಲ್ಕು ದಿನಗಳ ಹಿಂದೆಯೇ ಸಸ್ಪೆಂಡ್ ಮಾಡಿದ್ದಾರೆ‌ .
ದರೋಡೆ ಒಳಗಾದ ಕೇರಳದ ಪೋಲಿಸ್ ಪೇದೆ ದೂರು ನೀಡಲು ನಗರ ಠಾಣೆಗೆ ಹೋದಾಗ ಕೃತ್ಯ ನಡೆದ ಸ್ಥಳ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲವೆಂಬ ಸಬೂಬು ಹೇಳಿ ಬಡಾವಣೆ ಠಾಣೆಗೆ ಹೋಗುವಂತೆ ತಿಳಿಸಿ ತಾತ್ಸಾರ ಮಾಡಿದ್ದರು, ನಂತರ ಆತ ಬಡಾವಣೆ ಠಾಣೆಗೆ ಹೋದಾಗ ಅಲ್ಲಿದ್ದ ಪೇದೆಗಳಿಬ್ಬರು ಆತನ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರೆನ್ನಲಾಗಿದೆ.  ಇದರಿಂದಾಗಿ ತೊಂದರೆಗೆ ಒಳಗಾದ ಕೇರಳದ ಪೋಲಿಸ್ ಪೇದೆ ತಾನು ನಿರ್ವಹಿಸುತ್ತಿದ್ದ ಕರ್ತವ್ಯಕ್ಕೆ ಎರಡು ದಿನಗಳ ಕಾಲವಿಳಂಬವಾಗಿ ಹಿಂದಿರುಗಿ ಹಾಸನದಲ್ಲಿ ನಡೆದ ಕೃತ್ಯ ಹಾಗೂ ಪೋಲಿಸ್ ನಿರ್ಲಕ್ಷ್ಯದ ಬಗ್ಗೆ ಕೇರಳ ರಾಜ್ಯದ ಪೋಲಿಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದರಿಂದ ಆ ದೂರು ಅಧರಿಸಿ  ಕೇರಳದ ಪೋಲಿಸ್ ಮಹಾನಿರ್ದೇಶಕರು ಕರ್ನಾಟಕ ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಗಮನಕ್ಕೆ ತಂದರೆಂದು ತಿಳಿದು ಬಂದಿದೆ.
ರಾಜ್ಯ ಪೋಲಿಸ್ ಮಹಾ ನಿರ್ದೇಶಕರು ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿಯವರಿಗೆ ಘಟನೆಯ ವಿವರ ನೀಡಿ ತಾವು ತಮ್ಮ ಅಧೀನದ ಪೊಲೀಸ್‌ರನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳಲು ಏಕೆ ಸಾಧ್ಯ ಅಗುತ್ತಿಲ್ಲವೆಂಬ ಸಮಜಾಯಿಷಿ ಕೇಳಿದ ಹಿನ್ನಲ್ಲೆಯಲ್ಲಿ ನಾಲ್ವರು ಕಾನ್ ಸ್ಟೇಬಲ್ ಗಳನ್ನು ಸಸ್ಪೆಂಡ್ ಮಾಡಿದ್ದಾರೆ.        

Post a Comment

Previous Post Next Post