ಊರಿನ ಅಭಿವೃದ್ಧಿಗಾಗಿ ಸೇವಾ ಮನೋಭಾವ ಗ್ರಾಮದ ಯುವಕರ ಸದ ಮುಂದೆ : ಶ್ರೀನಿವಾಸ್

ಇದೇ ಊರಿನಲ್ಲಿ ಓದಿ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ನಾಗೇಂದ್ರ ಎಂಬುವವರು ರೋಟರಿ ಕ್ಲಬ್ 45 ಜನ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕಾಗಿ ಟ್ಯಾಬ್ ವಿತರಣೆ ಮಾಡಿದರು.
ಬಿದರಕ್ಕ ಯುವಕರ ಸಂಘದ ವತಿಯಿಂದ ಬಸ್ ನಿಲ್ದಾಣ ನವೀಕರಣ ಗೊಳಿಸುವುದು, ಆರೋಗ್ಯ ಶಿಬಿರ, ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕರಿಗೆ ಪಿಂಚಣಿ ಮತ್ತೆ ಕಂದಾಯ ಸೇವೆಗಳನ್ನು ಒದಗಿಸಲು ತಾಕಿತು ಮಾಡುವುದು ಯುವಕರಿಗೆ ಊರಿನ ಅಭಿವೃದ್ಧಿಯ ಬಗ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ.

ಒತ್ತುವರಿಯಾದ ಕೆರೆಯನ್ನು ತೆರವುಗೊಳಿಸುವಂತೆ ತಹಶೀಲ್ದಾರರಿಗೆ ಎಲ್ಲರೂ ಮನವಿ ಮಾಡಿದರು. ಅಭಿವೃದ್ಧಿಯ ಕನಸು ಕಂಡ ಯುವಕರು ಊರಿನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದರು. 

Post a Comment

Previous Post Next Post