ಮಲೆನಾಡು ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿಸಿದ್ದಲ್ಲದೆ, ಭೂಕಂಪನದ ಅನುಭವ ಕೂಡ ಆಗಿದ್ದು ಸಾರ್ವಜನಿಕರು ಒಮ್ಮೆ ಬೆಚ್ಚಿ ಬೀಳುವಂತಾಗಿದೆ. ಇಂದು ರಾತ್ರಿ ಇದೀಗ ಕೆಲವು ನಿಮಿಷಗಳ ಹಿಂದೆ ಜರುಗಿದ ಈ ವಿದ್ಯಮಾನ ಮಲೆನಾಡಿನ ಜನರ ನಿದ್ದೆಗೆಡುವಂತೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕಿನ ಕೆಲವು ಪ್ರದೇಶಗಳಲ್ಲಿ 10:21ರಿಂದ 10:23ರ ನಡುವೆ ಶಬ್ದ ಹಾಗೂ ಕಂಪನದ ಅನುಭವ ಆಗಿದೆ. ಕೊಪ್ಪ ತಾಲೂಕಿನ ದೊರೇಗಲ್ಲು ಗ್ರಾಮ ಸೇರಿ ಎನ್.ಆರ್.ಪುರ ಪಟ್ಟಣ ಹಾಗೂ ಕೊಪ್ಪದ ಹಲವೆಡೆ ಈ ಅನುಭವ ಉಂಟಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮಾತ್ರವಲ್ಲ, ಹೆದರಿದ ಜನರು ಮನೆಯಿಂದ ಹೊರಬಂದು ನಿಂತ ದೃಶ್ಯಗಳೂ ಕಂಡುಬಂದವು.
ಜನ ತಮ್ಮ ಸಂಬಂಧಿಕರು ಸ್ನೇಹಿತರಿಗೆ ಕರೆ ಮಾಡಿ ಭೂಕಂಪನದ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪನದ ಭಾರೀ ಚರ್ಚೆಯಾಗಿದೆ.
Tags
ರಾಜ್ಯ