ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಸತತ ಇಳಿಕೆ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಹಳದಿ ಲೋಹವು ಒತ್ತಡಕ್ಕೆ ಸಿಲುಕಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.3ರಷ್ಟು ಇಳಿಕೆಯಾಗಿ 44,732 ಕ್ಕೆ ತಲುಪಿದ್ದರೆ, ಬೆಳ್ಳಿ ದರಗಳು ಶೇಕಡಾ 0.7ರಷ್ಟು ಇಳಿದು 67,011ಕ್ಕೆ ತಲುಪಿದೆ.
ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 1.4ರಷ್ಟು ಮತ್ತು ಬೆಳ್ಳಿ ಬೆಲೆಯ ಶೇಕಡಾ 2.6ರಷ್ಟು ಏರಿಕೆಯಾಗಿದೆ. 2020 ರಲ್ಲಿ ಚಿನ್ನವು ಸುಮಾರು ಶೇಕಡಾ 25ರಷ್ಟು ಏರಿಕೆ ಕಂಡಿದ್ದು, ಆಗಸ್ಟ್‌ನಲ್ಲಿ ದಾಖಲೆಯ ಗರಿಷ್ಠ, 56,200 ರೂಪಾಯಿಗೆ ತಲುಪಿದೆ.
ಹೀಗೆ ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ವಹಿವಾಟಿನಲ್ಲಿ ದೊಡ್ಡ ಏರಿಕೆಯ ನಂತರ ಚಿನ್ನದ ಬೆಲೆಗಳು ಇಂದು ಕಡಿಮೆಯಾಗಿದೆ. ಚಿನ್ನವು ಶೇಕಡಾ 0.2ನಷ್ಟು ಇಳಿದು ಔನ್ಸ್‌ಗೆ 1,712.82 ಡಾಲರ್ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಲೋಹವು ಶೇಕಡಾ 2ಕ್ಕಿಂತ ಹೆಚ್ಚಾಗಿದೆ, ಇದು ಒಂಬತ್ತು ತಿಂಗಳ ಕನಿಷ್ಠ ಮಟ್ಟದಿಂದ ಬಲವಾದ ಚೇತರಿಕೆಗೆ ಕಾರಣವಾಗಿದೆ.
ವಿಶ್ವದ ಅತಿದೊಡ್ಡ ಚಿನ್ನ ಬೆಂಬಲಿತ ವಿನಿಮಯ-ವಹಿವಾಟು ನಿಧಿಯ ಎಸ್‌ಪಿಡಿಆರ್ ಗೋಲ್ಡ್ ಟ್ರಸ್ಟ್‌ನ ಹೋಲ್ಡಿಂಗ್ಸ್ ಸೋಮವಾರ 2020 ರ ನಂತರದ ಕನಿಷ್ಠ ಮಟ್ಟಕ್ಕೆ ಕುಸಿದಿದೆ.