ಹಾಸನದಲ್ಲಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಯಂತ್ರಕ್ಕೆ ಕೈ ಸಿಲುಕಿ ಯುವತಿಯೊಬ್ಬಳು ಸಾವು

ಹಾಸನ: ಬಟ್ಟೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಯಂತ್ರಕ್ಕೆ ಕೈ ಸಿಲುಕಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ದೊಡ್ಡ ಬ್ಯಾಗತವಳ್ಳಿ ಗ್ರಾಮದ ಕಾವ್ಯ (20) ಮೃತಪಟ್ಟ ಗಾರ್ಮೆಂಟ್ಸ್ ಉದ್ಯೋಗಿ. ಈಕೆ ಕಳೆದ ಎರಡು ತಿಂಗಳ ಹಿಂದೆ ಶಾಹಿ ಗಾರ್ಮೆಂಟ್ಸ್​ಗೆ ಕೆಲಸಕ್ಕೆ ಸೇರಿದ್ದಳು. ಮುದ್ರಣ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾವ್ಯ ಆಕಸ್ಮಿಕವಾಗಿ ಇಂದು ಯಂತ್ರಕ್ಕೆ ಕೈ ಕೊಟ್ಟಿದ್ದಾಳೆ.ಸ್ವಯಂ ಚಾಲಿತ ಯಂತ್ರವಾಗಿದ್ದರಿಂದ ದೇಹದ ಅರ್ಧ ಭಾಗ ಅದಕ್ಕೆ ಸಿಲುಕಿಕೊಂಡು ನರಳಾಡುತ್ತಿದ್ದಳು. ಇದನ್ನು ಕಂಡ ಸಹೋದ್ಯೋಗಿಗಳು ತಕ್ಷಣ ಯಂತ್ರವನ್ನು ಆಫ್ ಮಾಡಿದ್ದಾರೆ. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಕಾವ್ಯ ಮೃತಪಟ್ಟಿದ್ದಾಳೆ.ಯಂತ್ರಕ್ಕೆ ಸಿಲುಕಿ ಸಾವಿಗೀಡಾದ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಈ ಸಂಬಂಧ ಗಾರ್ಮೆಂಟ್ಸ್ ಮಾಲೀಕರು ಸ್ಥಳಕ್ಕೆ ಬಾರದ ಹಿನ್ನೆಲೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಫ್ಯಾಕ್ಟರಿ ಮುಂದೆ ಇಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Post a Comment

Previous Post Next Post