ನೀರಿನ ಶುದ್ಧೀಕರಣ ಯಂತ್ರದ ಕಾಮಗಾರಿಗೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಚಾಲನೆ ನೀಡಿದರು.

ರಾಮನಾಥಪುರ;-: ಶುದ್ಧ ಕುಡಿಯುವ ನೀರನ್ನು ಬಳಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡಗಟ್ಟಬಹುದು. ಅರೋಗ್ಯದ ದೃಷ್ಟಿಯಿಂದ ಶುದ್ಧವಾದ ಕುಡಿಯುವ ನೀರನ್ನು ಒದಗಿಸಿ ಆರೋಗ್ಯವನ್ನು ಕಾಪಾಡಬೇಕು. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ಹೇಳಿದರು.


ರಾಮನಾಥಪುರದ ಕಾವೇರಿ ನದಿ ತಟದಲ್ಲಿ 95 ಲಕ್ಷ ರೂ ವೆಚ್ಚದ ಫಿಲ್ಟರ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಅನೇಕ ವರ್ಷಗಳ ಬಹು ನಿರೀಕ್ಷೆಯಲ್ಲಿದ್ದ ಇಲ್ಲಿಯ ಪಟ್ಟಣಕ್ಕೆ ಕುಡಿಯುವ ನೀರನ್ನು ಶುದ್ಧೀಕರಿಸಲು ಫಿಲ್ಟರ್ ಯಂತ್ರಗಾರದ ಕಾಮಗಾರಿಗೆ ಚಾಲನೇ ನೀಡಲಾಗಿದೆ. ಅವಶ್ಯಕತೆ ಇರುವಷ್ಟು ನೀರನ್ನು ಬಳಸಿ ಎಂದರು. ರಾಮನಾಥಪುರದಲ್ಲಿ 6  ಎಕ್ಕರೆ ನೀವೇಶನ ನೀವೇಶನರಹಿರಿಗೆ ಮಂಜೂರಾಗಿದೆ. ಸೆಸ್ಕಾಂ ಇಜಿನಿಯರ್ ಅಫೀಸು. ರೈತ ಸಂಪರ್ಕ ಕೇಂದ್ರ, ಬಸ್ ಸ್ಯಾಂಡ್, ಡಿಪೋ, ಕಾವೇರಿ ನದಿಗೆ ಸೇತುವೆ, ನದಿಗೆ ತಡೆಗೋಡೆ, ಪಟ್ಟಣದ ಬಹುತೇಖ ರಸ್ತೆಗಳಿಗೆ ಡಾಂಬರೀಕರಣ, ದೇವಸ್ಥಾನದ ಹತ್ತಿರ 2 ಶೌಚಾಲಯಗಳು, ಮಹಿಳಾ ಪದವಿಪೂರ್ವಕಾಲೆಜು ಅಸ್ಪತ್ರೆ, ಸೇರಿದಂತೆ ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಈ ಪಟ್ಟಣಕ್ಕೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿಸಿದ್ದೇನೆ ಎಂದರು.

ಕಾವೇರಿ ನದಿ ತಟದಲ್ಲಿ 95 ಲಕ್ಷ ರೂ ವೆಚ್ಚದ ಫಿಲ್ಟರ್ ಕಾಮಗಾರಿಗೆ ಚಾಲನೆ ನೀಡಿದ್ದು ಇನ್ನೂ 4 ತಿಂಗಳಲ್ಲಿ ಮುಗಿಸುತ್ತೇವೆ ಎಂದು ಇಂಜಿನಿಯರ್ ಸಮೀರ್ ತಿಳಿಸಿದ್ದಾರೆ. ಅದರಂತೆ ತಾವು ಉತ್ತಮ ರೀತಿ ಕಾಮಾಗಾರಿ ಮಾಡಿ ಇಲ್ಲಿಯ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಇಜಿನಿಯರ್ ಸಮೀರ್ ಅವರಿಗೆ ತಿಳಿಸಿದ ಅವರು ಈ ಶುದ್ಧೀಕರಣ ಯಂತ್ರದ ಮುಚುಣಿಗೆ ಕಾರ್ಯನಿರ್ವಹಿಸಿದ ಸಹಾಯಕಕಾರ್ಯಪಾಲಕ ಇಂಜಿನಿಯರ್ ಅದ ಸಂಗೀತ ಗ್ರಾಮ ರುದ್ರಪಟ್ಟಣದ ಅಶ್ವತ್‌ನಾರಾಯಣವರಿಗೆ ಧನ್ಯವಾದ ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಜೆ. ಹೇಮಲತಾ, ಉಪಾಧ್ಯಕ್ಷೆ, ಗೌರಮ್ಮ, ಬಸವಪಟ್ಟಣ ಗ್ರಾ,ಪಂ. ಅಧ್ಯಕ್ಷರಾದ ಅನುಸೂಯ, ರುದ್ರಪಟ್ಟಣ ರೂಪ, ಲಕ್ಕೂರು ಮಹೇಶ್, ಕೊಣನೂರು ರಮೇಶ್, ಇಂಜಿನಿಯರ್ ಸಮೀರ್, ಕಾರ್ಯಪಾಲಕ ಇಂಜಿನಿಯರ್ ರುದ್ರಪಟ್ಟಣದ ಅಶ್ವತ್‌ನಾರಾಯಣ, ಗ್ರಾಮ. ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಳೇಗೌಡ, ಚಿಕ್ಕಣ್ಣಶೆಟ್ಟಿ, ದಿವಾಕರ್, ಶ್ರೀನಿಧಿ, ಅಭಿವೃದ್ದಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.

 


Post a Comment

Previous Post Next Post