ಸಿದ್ದಗಂಗಾ ಶ್ರೀ ಶಿವಕುಮಾರಮಹಾಸ್ವಾಮಿಜಿಯವರ ಜನ್ಮದಿನದ ಪ್ರಯುಕ್ತ ಲಿಂಗಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ರಾಮನಾಥಪುರ.;-  ಅರಕಲಗೂಡು ತಾಲ್ಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆವತಿಯಿಂದ ಕಲಿಯುಗ ಬಸವಣ್ಣ ಸಿದ್ದಗಂಗಾ ಶ್ರೀ ಶಿವಕುಮಾರಮಹಾಸ್ವಾಮಿಜಿಯವರ ಜನ್ಮದಿನದ ಪ್ರಯುಕ್ತ ಕೂಡಿಗೆ ಗ್ರಾಮದಲ್ಲಿ ಏಪ್ರಿಲ್ 1 ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಉಚಿತ ಲಿಂಗಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ವೀರಶೈವ-ಲಿಂಗಾಯುತ ಮಹಾ ವೇದಿಕೆ ಸಂಚಾಲಕ ಕೂಡಿಗೆ ನಂದೀಶ್ ತಿಳಿಸಿದರು.


ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೂಡ್ಲೂರು ಮಠ ಶ್ರೀ ಸಿದ್ದಮಲ್ಲಿಕಾಜೂನಸ್ವಾಮೀಜಿ, ಅನೇಕಲ್ ತಾಲ್ಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಸಂಸ್ಥಾಪಕರು, ರಾಜಾಪುರ ಮಠದ ನಟರಾಜುಸ್ವಾಮಿ, ಅರಕಲಗೂಡು ತಾಲ್ಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಗೌರವಅಧ್ಯಕ್ಷರು ಪಶುಪತಿ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಡಾ. ಎಂ.ಎನ್. ಕುಮಾರಸ್ವಾಮಿ ಮುಂತಾದವರು ಭಾಗವಹಿಸುವರು.

 ವೀರಶೈವ-ಲಿಂಗಾಯಿತ ವಟುಗಳಿಗೆ ಕರಡಿಗೆ, ಲಿಂಗು ಮುಂತಾದ ದೀಕ್ಷಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಶಿವದೀಕ್ಷೆಯನ್ನು ಕೋವಿಡ್ 19 ಇರುವ ಕಾರಣ ಸಮಾಂತರ ಅಂತರ ಕಾಯ್ದುಕೊಂಡು ಲಿಂಗಾಧರಣೆ ಮಾಡಲಾಗುತ್ತಿದೆ ವಿಶ್ವ ವೀರಶೈವ-ಲಿಂಗಾಯುತ ಮಹಾ ವೇದಿಕೆ ಸಂಚಾಲಕ ಕೂಡಿಗೆ ನಂದೀಶ್ ತಿಳಿಸಿದರು.


Post a Comment

Previous Post Next Post