ಸಹಪಾಠಿಗಳಿಂದ ನಿಂದನೆ ಆರೋಪದಿಂದ ಮನನೊಂದು ಬಾಲಕ ಆತ್ಮಹತ್ಯೆ

ಸಹಪಾಠಿಗಳಿಂದ ನಿಂದನೆ ಆರೋಪದಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಹರುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು ಹರ್ಷಿತ್ ಗೌಡ 16 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
 ಹಾಸನ ತಾಲ್ಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕ

 ಒಂದು ವರ್ಷದ ಹಿಂದೆ ಹರ್ಷಿತ್ ಗೆ ಸ್ಟ್ರೋಕ್ ಆಗಿತ್ತು

 ಶಾಲೆಯಲ್ಲಿ ಹರ್ಷಿತ್ ನನ್ನು ರೇಗಿಸುತ್ತಿದ್ದ ಸಹಪಾಠಿ ವಿದ್ಯಾರ್ಥಿಗಳು

 ಇದೇ ವಿಚಾರವಾಗಿ ಮಾ.19 ರಂದು
 ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು

 ಈ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಬುದ್ದಿಮಾತು ಹೇಳಿದ್ದರು

 ಇದರಿಂದ ಬೇಸರಗೊಂಡ ಶಾಲೆ ಬಿಟ್ಟು ತನ್ನ ಊರಿಗೆ ಹೋಗಿದ್ದ ಹರ್ಷಿತ್

 ದನಗಳನ್ನು ಮೇಯಿಸಲು ಹೋದಾಗ ಜಮೀನಿನ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ

 ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Post a Comment

Previous Post Next Post