ಪ್ರವೀಣ್ ಮಧುಕರ್ ಪೊಲೀಸ್ ಕೆಲಸ ಎಂದರೇ ಕೇವಲ ಸಂಬಳಕ್ಕಾಗಿಯಲ್ಲ .

ಹಾಸನ: ಪೊಲೀಸ್ ಕೆಲಸ ಎಂದರೇ ಕೇವಲ ಸಂಬಳಕ್ಕಾಗಿ ಮಾತ್ರವಲ್ಲ. ನ್ಯಾಯಯುತವಾಗಿ ತನಿಖೆ ಮಾಡಿ ನೊಂದವರಿಗೆ ನ್ಯಾಯ ನೀಡಬೇಕು ಎಂದು ಮೈಸೂರು ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಾದ ಪ್ರವೀಣ್ ಮಧುಕರ್ ಪವಾರ್ ಅಭಿಪ್ರಾಯಪಟ್ಟರು.


       ನಗರದ ಹೊಸಲೈನ್ ರಸ್ತೆ ಬಳಿ ಇರುವ ಪೊಲೀಸ್ ಕವಾಯತ್ ಮೈದಾನದಲ್ಲಿ ತಾತ್ಕಲಿಕ ಪೊಲೀಸ್ ತರಬೇತಿ ಶಾಲೆ 16ನೇ ತಂಡದ ನಾಗರೀಕ 47 ಜನ ಪೊಲೀಸ್ ಕಾನ್ಸ್ ಟೇಬಲ್ ಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ಸಮವಸ್ತçವನ್ನು ಧರಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೇವಲ ವಿಶೇಷ ಯೋಗ್ಯತೆಯನ್ನು ಪಡೆದವರು ಮಾತ್ರ ಸಾಧ್ಯ. ಪೊಲೀಸ್ ಹುದ್ದೆ ಎಂದರೇ ಒಂದು ಸೇವೆಯಾಗಿದ್ದು, ಕೇವಲ ಸಂಬಳಕ್ಕಾಗಿ ಮಾಡುವ ಕೆಲಸವಲ್ಲ. ಪೊಲೀಸ್ ಸಮವಸ್ತçದೊಂದಿಗೆ ಹೊಂದಿಕೊAಡಿರುವ ಗೌರವ ಮತ್ತು ಬಲಿದಾನಕ್ಕಾಗಿ ಮಾಡುವ ಕೆಲಸವಾಗಿದ್ದು, ನಿಮ್ಮ ಕೆಲಸದಲ್ಲಿ ನೀವು ಯಾವುದೇ ರೀತಿಯ ಸೋಮಾರಿತನ, ದುರಾಸೆ ಇತರೆ ಗುಣಗಳನ್ನು ಮೈಗೂಡಿಸಿಕೊಳ್ಳದೆ, ಒಳ್ಳೆಯ ಮಾದರಿ ಪೊಲೀಸರಾಗಿ ಕೆಲಸ ಮಾಡಬೇಕು ಎಂದರು.

      ಪ್ರಸ್ತುತದಲ್ಲಿ ಅಪರಾಧಿಗಳು ಸಹ ಹೊಸ ಹೊಸ ರೀತಿಯಲ್ಲಿ ಅಪರಾಧಗಳನ್ನು ಮಾಡುತ್ತಿರುವುದರಿಂದ ಪೊಲೀಸರಿಗೆ ಸವಾಲಾಗುತ್ತಿದ್ದಾರೆ. ನಿಮ್ಮಲ್ಲಿ ತಾಂತ್ರಿಕ ಪದವಿ ಹಾಗೂ ಇತರೆ ಪದವೀದರರು ಇರುವುದು ನಿಮ್ಮ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುತ್ತದೆ. ನೀವು ತರಬೇತಿಯನ್ನು ಮುಗಿಸಿ ಕಾರ್ಯಕ್ಷೇತ್ರಕ್ಕೆ ತೆರಳಿದಾಗ ನಿಮ್ಮ ವಿದ್ಯಾಭ್ಯಾಸದ ಉಪಯೋಗವನ್ನು ಮಾಡಿಕೊಂಡು ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ನ್ಯಾಯಯುತವಾಗಿ ತನಿಖೆಯನ್ನು ಮಾಡಿ ನೊಂದವರಿಗೆ ನ್ಯಾಯ ನೀಡಬೇಕು ಎಂದು ಕಿವಿಮಾತು ಹೇಳಿದರು, ಪೊಲೀಸ್ ಕೆಲಸವು ಇಂದಿನ ದಿನಗಳಲ್ಲಿ ಸಾಂಪ್ರಾದಾಯಿಕ ಪೊಲೀಸ್ ಕೆಲಸಗಳ ಜೊತೆಗೆ ಹೆಚ್ಚು ನೈಪುಣ್ಯತೆಯನ್ನು ಸಹ ಕೇಳುತ್ತದೆ. ಅದಕ್ಕಾಗಿ ನೀವು ನಿಮ್ಮ ವಿದ್ಯೆಯ ಸದುಪಯೋಗವನ್ನು ಮಾಡಿಕೊಳ್ಳಬೇಕು. ನೊಂದವರು ಠಾಣೆಗೆ ಬಂದು ಭೇಟಿ ಮಾಡಿದಾಗ ಅವರಲ್ಲಿ ಶ್ರೀಮಂತರು, ಬಡವರು, ಅಸಹಾಯಕರು ಸೇರಿದಂತೆ ಎಲ್ಲರೂ ಬರುತ್ತಾರೆ. ನಿಮ್ಮ ನಡವಳಿಕೆ ಇಡೀ ಪೊಲೀಸ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನೊಂದವರ ಸಮಸ್ಯೆಯನ್ನು ಬಗೆಹರಿಸುವುದು, ವಿನಯದಿಂದ ಸಾರ್ವಜನಿಕರೊಂದಿಗೆ ವ್ಯಹರಿಸುವುದು, ಯಾವುದೇ ರೀತಿಯ ಲಂಚಕ್ಕೆ ಆಸೆಪಡದೆ, ನಿಮ್ಮ ವ್ಯಕ್ತಿತ್ವವನ್ನು ಪರಿಶುದ್ಧವಾಗಿ ಇಟ್ಟುಕೊಂಡು ಪೊಲೀಸ್ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮಹತ್ತರವಾದ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಎಂದು ಸಲಹೆ ನೀಡಿದರು. ನಾಗರೀಕ ಪೊಲೀಸರಾದ ನಮಗೆ ಅಪರಾಧ ತಡೆ ಮತ್ತು ಪತ್ತೆ, ಸಂಚಾರ ನಿರ್ವಹಣೆ, ವಿಐಪಿ ಭಧ್ರತೆ ಹಾಗೂ ಬಹಳ ಮುಖ್ಯವಾಗಿ ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ಹೊಸ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ತಿಳುವಳಿಕೆ ಮಾತುಗಳನ್ನು ಹೇಳಿದರು. 

    ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಚನ್ನಾಗಿ ಇರುವಂತೆ ನೋಡಿಕೊಳ್ಳಬೇಕಾದ ಕರ್ತವ್ಯ ನಮ್ಮದು. ಆ ಮೂಲಕ ಇಲಾಖೆಗೆ ನಮ್ಮ ಜಿಲ್ಲೆಗೆ , ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ವ್ಯವಸ್ಥೆಗೆ ಒಳ್ಳೆಯ ಹೆಸರನ್ನು ತರೋಣ. ನಾವು ಮಾಡುವ ಕೆಲಸವೇ ದೇವರಿಗೆ ಮಾಡುವ ಪೂಜೆ ಎಂದು ತಿಳಿದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಕೆಸಲವನ್ನು ಮಾಡಬೇಕು. ನಿಮ್ಮ ಕುಟುಂಬವನ್ನು ತಂದೆ ತಾಯಿಯರನ್ನು ಪ್ರೀತಿ ಪ್ರೇಮದಿಂದ ಕಂಡು, ನಿಮ್ಮ ಮುಂದಿನ ಪೀಳಿಗೆಗೆ ನೀವು ಮಾದರಿಯಾಗಿರಬೇಕು ಎಂದು ಕರೆ ನೀಡಿದರು.

       ಕಾರ್ಯಕ್ರಮದಲ್ಲಿ ಮೊದಲು ತಾತ್ಕಲಿಕ ಪೊಲೀಸ್ ತರಬೇತಿ ಶಾಲೆ 16ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಗಳ ನಿರ್ಗಮನ ಪಥ ಸಂಚಲನ ಮಾಡಲಾಯಿತು. ರಾಷ್ಟç ಹಾಗೂ ಪೊಲೀಸ್ ಧ್ವಜಗಳ ಆಗಮನವಾಯಿತು. ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೆ ವೇಳೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ತರಬೇತಿ ವೇಳೆ ಉತ್ತಮವಾಗಿ ಭಾಗವಹಿಸಿದವರನ್ನು ಗುರುತಿಸಿ ಬಹುಮಾನ ವಿತರಣೆ ಮಾಡಿದರು. 

      ಈಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ಇತರರು ಉಪಸ್ಥಿತರಿದ್ದರು.


Post a Comment

Previous Post Next Post