ಸಕಲೇಶಪುರ ಪುರಸಭೆ ಬಜೆಟ್ ಮಂಡನೆ

ಸಕಲೇಶಪುರ: ಪಟ್ಟಣದ ಪುರಸಭೆ 2021-22ರ ಸಾಲಿನಲ್ಲಿ 1,53,20,408 ರೂಗಳ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ಹೇಳಿದರು.


ಪಟ್ಟಣದ ಪುರಸಭಾ ಸಭಾಂಗಣದಲ್ಲಿ 2021-22ರ ಸಾಲಿನ ಬಜೆಟ್‌ನ್ನು ಮಂಡಿಸಿದ ನಂತರ ಮಾತನಾಡಿ ಸುಮಾರು 1,53,20,408 ರೂಗಳ ಉಳಿತಾಯ ಬಜೆಟ್‌ನ್ನು ಈ ಬಾರಿ ಮಂಡಿಸಲಾಗಿದೆ. ಪಟ್ಟಣದ ಸಮಗ್ರ ಅಭಿವೃದ್ದಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬಜೆಟ್ ರಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಪಟ್ಟಣದ ಹೆಚ್ಚಿನ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತನಾಡಿ ಕೋವಿಡ್ 2ನೇ ಅಲೆ ಎಲ್ಲೆಡೆ ಆರಂ‘ವಾಗಿದ್ದು ಈ ನಿಟ್ಟಿನಲ್ಲಿ ಪುರಸಭಾ ಸದಸ್ಯರುಗಳು ಕೋವಿಡ್ ಪಟ್ಟಣದಲ್ಲಿ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿ ವಾರ್ಡ್‌ನಲ್ಲೂ ಜನ ಮಾಸ್‌ಕ್ ‘ರಿಸಲು ಮುಂದಾಗುವಂತೆ ನೋಡಿಕೊಳ್ಳಬೇಕು ಹಾಗೂ 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೊರೋನಾ ಲಸಿಕೆ ಪಡೆಯಲು ಕಳುಹಿಸಿಕೊಡಬೇಕು ಎಂದರು.
ಒಟ್ಟಾರೆಯಾಗಿ 2021-22ನೇ ಸಾಲಿನ ಒಟ್ಟು ಜಮಾ 28,61,82,908 ರೂಗಳು, ಹಾಗೂ 2021-22ನೇ ಸಾಲಿನ ನಿರೀಕ್ಷಿತ ಖರ್ಚು 27,08,62,500ರೂ ಒಟ್ಟಾರೆಯಾಗಿ 1,53, 20, 408 ರೂಗಳನ್ನು ಉಳಿತಾಯ ಮಾಡಲು ಯೋಜಿಸಲಾಗಿದೆ.
ಈ ಸಂ‘‘ರ್ದಲ್ಲಿ ಪುರಸಭಾ ಉಪಾಧ್ಯಕ್ಷ ಜರೀನಾ, ಪುರಸಭಾ ಮುಖ್ಯಾಧಿಕಾರಿ ಸ್ಟೀನ್ ಪ್ರಕಾಶ್ ಸೇರಿದಂತೆ ಬಹುತೇಕ ಪುರಸ‘ಾ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಸಕಲೇಶಪುರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು

Post a Comment

Previous Post Next Post