ಹಾಸನ: ಶ್ರೀ ರಾಮಾವ್ರತ ತರಂಗಿಣಿ ರಥವು ಹಾಸನ ನಗರದ ಹೌಸಿಂಗ್ ಬೋರ್ಡಿನಲ್ಲಿರುವ ಈಶಾವಾಸ್ಯಮ್ ಮುಂದೆ ಶ್ರೀ ಹರಿಹರಪುರ ಶ್ರೀಧರ್ ಮನೆ ಮುಂದೆ ಆಗಮಿಸಿ ಪುಣ್ಯ ಜಲ, ಮೃತ್ತಿಕೆ (ಮಣ್ಣು) ಹಾಗು ಶ್ರೀ ರಾಮನ ಪಾದುಕೆಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಶ್ರೀ ರಾಮನುಗ್ರಹಕ್ಕೆ ಪಾತ್ರರಾದರು.
ಇದೆ ವೇಳೆ ಮಾತನಾಡಿದ ಪತಂಜಲಿ ಯೋಗಾ ಸಮಿತಿಯ ಮಹಾ ಪೋಷಕರಾದ ಹರಿಹರಪುರ ಶ್ರೀಧರ್ ರವರು, ಪವಿತ್ರವಾದಂತಹ 16 ನದಿಗಳ ಜಲವನ್ನು ಮೃತ್ತಿಕೆಯನ್ನು ಹೊತ್ತಿರುವ ಶ್ರೀರಾಮ ತರಂಗಿಣಿ ರಥವು ಹಾಸನಕ್ಕೆ ಆಗಮಿಸಿ ದರ್ಶನ ನೀಡುತ್ತಾ ಬಂದಿದೆ. ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀ ಪಾದುಕೆಗೆ ಪೂಜೆ ಮಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಮತ್ತು ಸಂಜೆ 6 ಗಂಟೆಯಿAದ ಬೆಂಗಳೂರಿನ ಸುಪ್ರಸಿದ್ದ ಕೊಳಲು ರಾಮನ ವಾದಕ ವಿದ್ವಾನ್ ಬಿ.ಕೆ. ಅನಂತರಾಮ್ ಮತ್ತು ತಂಡದವರಿAದ ಕೊಳಲುವಾದನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿದೆ ಎಂದರು. ಉದಯಗಿರಿ, ಕುವೆಂಪುನಗರ, ಕೆ.ಆರ್.ಪುರಂ, ರವೀಂದ್ರನಗರ ಬಡಾವಣೆಯ ಮನೆಗಳಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಸಂಜೆ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಭಜನೆ ಕಾರ್ಯಕ್ರಮ ನಡೆಯುತ್ತದೆ. ಈ ಪುಣ್ಯ ಕಾರ್ಯದಲ್ಲಿ ಹಾಸನ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಭು ಶ್ರೀ ರಾಮನ ಕೃಪೆಗೆ ಪಾತ್ರರಾಗಿರುವುದಕ್ಕೆ ಸಂತೋಷವ್ಯಕ್ತಪಡಿಸಿದರು.
ಇದೆ ವೇಳೆ ಅಮೋಘ ವಾಹಿನಿಯ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್, ನಗರ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಚಂದ್ರಶೇಖರ್, ಸಮಿತಿ ಸಂಚಾಲಕ ವೇಣುಗೋಪಾಲ್, ಪ್ರಸಾದ್, ಪತಂಜಲಿ ಪರಿವಾರದ ಲೀಲಾ ಇತರರು ಪಾಲ್ಗೊಂಡಿದ್ದರು.