ಹಾಸನದ ಹೊಸ ಬಸ್ ನಿಲ್ದಾಣದಲ್ಲಿ ಮಲಗಿದ್ದ ಬಾಲಕಿ ಕರೆದೊಯ್ದೂ ಅತ್ಯಾಚಾರ

 ಹಾಸನ: ರಾತ್ರಿ ವೇಳೆ ತನ್ನ ತಂದೆ ತಾಯಿಯೊಂದಿಗೆ ಮಲಗಿದ್ದ ಏಳು ವರ್ಷದ ಬಾಲಕಿಯನ್ನು ವ್ಯಕ್ತಿ ಓರ್ವ ಹೆಗಲ ಮೇಲೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದೂ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿರುವ ಘಟನೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

      ಹೊರ ರಾಜ್ಯದಿಂದ ಬಡ ಕುಟುಂಬವೊAದು ಜೀವನಕ್ಕಾಗಿ ಹಾಸನ ಜಿಲ್ಲೆಗೆ ಬಂದ ತಂದೆ, ತಾಯಿ ಮತ್ತು ಸುಮಾರು 7 ವರ್ಷದ ಮಗಳು ಬಂದಿದ್ದು, ಕೂಲಿ ಸಿಗದೆ ಬಿಕ್ಷಾಟನೆಗೆ ಮೊರೆ ಹೋಗಿದ್ದರು. ಇರಲು ಸೂರು ಇಲ್ಲದೇ ಹೊಸ ಬಸ್ ನಿಲ್ದಾಣ ಇತರ ಭಾಗಗಳಲ್ಲಿ ಮಲಗಬೇಕಾಗಿತ್ತು. ಶನಿವಾರದಂದು ಗಂಡ, ಪತ್ನಿ ಹಾಗು ಇವರÀ ಮಗಳು 7 ವರ್ಷದ ಬಾಲಕಿ ನಗರದ ಬಸ್ ನಿಲ್ದಾಣದ ಒಳಗೆ ಇರುವ ಮೆಡಿಕಲ್ ಮುಂದೆ ಮಲಗಿದ್ದಾಗ. ತಡರಾತ್ರಿ 12 ಗಂಟೆಯ ಸಮಯದಲ್ಲಿ ಬಾಲಕಿಯನ್ನು ಅಪರಿಚಿತ ವ್ಯಕ್ತಿ ಓರ್ವ ಬಸ್ಸು ನಿಲ್ದಾಣದಿಂದ ಹೆಗಲ ಮೇಲೆ ಹೊತ್ತುಕೊಂಡು ನಿಲ್ದಾಣದ ಹೊರಗೆ ಕರೆದುಕೊಂಡು ಹೋಗಿ ಸಮೀಪದಲ್ಲಿದ್ದ ಬೇಲಿ ಇರುವ ಜಾಗದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಷ್ಟೊತ್ತಿಗೆ ಮಲಗಿದ್ದ ತಂದೆ-ತಾಯಿಗೆ ಎಚ್ಚರವಾದಾಗ ಬಳಿ ಮಗು ಇರಲಿಲ್ಲ. ನಂತರ ಗಾಬರಿಯಲ್ಲಿ ಕೂಗಾಡಿದಾಗ ಅಲ್ಲೆ ಇಲ್ಲದ ಪೊಲೀಸರು ಓಡಿ ಬಂದಿದ್ದಾರೆ. ಅಷ್ಟರ ವೇಳೆಗೆ ಮಗೂ ಅಳುತ್ತಿದ್ದನ್ನು ಗಮನಿಸಿದ ಪ್ರಯಾಣಿಕರು ಕರೆ ತಂದು ವಿಚಾರಿದ್ದಾರೆ.

ನಂತರದಲ್ಲಿ ಬಾಲಕಿ ಅಳುತ್ತಾ ವಾಪಸ್ ಬರುವಾಗ ಸಾರ್ವಜನಿಕರು ಬಾಲಕಿಯನ್ನು ನೋಡಿದ್ದು, ನಂತರ ವಿಷಯ ತಿಳಿದ ಪೊಲೀಸ್ ಸಿಬ್ಬಂದಿ ಈ ಬಗ್ಗೆ ವಿಚಾರಣೆ ನಡೆಸಿ, ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅರೋಪಿ ಮಗುವನ್ನು ಎತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಚಾರ ಪ್ರಕರಣ ದಾಖಲಾಗಿದ್ದು, ಅರೋಪಿಯನ್ನು  ಬಂಧಿಸಲು ತನಿಖೆ ಮುಂದುವರೆಸಿದ್ದಾರೆ.


Post a Comment

Previous Post Next Post