ಹಾಸನ: ಸಮಾಜದಲ್ಲಿ ಮಾನವ ಹಕ್ಕುಗಳ ಕೊಡುಗೆಯನ್ನು ಕಟ್ಟಕಡೆಯ ಜನರಿಗೂ ಮುಟ್ಟಿಸುವ ಕೆಲಸ ಮಾಡಬೇಕೆ ವರತು ಯಾವ ಅಧಿಕಾರಗಳನ್ನು ಬ್ಲಾಕ್ ಮೇಲ್ ಮಾಡುವ ಕೆಲಸ ಮಾಡಬೇಡಿ ಎಂದು ಸಮಿತಿ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ಛರ‍್ಮನ್ ಕೊಲ್ಲಾಡಿ ಬಾಲಕೃಷ್ಣ ರೈ ಸಲಹೆ ನೀಡಿದರು.
ನಗರದ ಅರಳೇಪೇಟೆ ರಸ್ತೆ, ಸಹ್ಯಾದ್ರಿ ಚಿತ್ರಮಂದಿರದ ಹಿಂಬಾಗದಲ್ಲಿರುವ ಮಾನವ ಬಂಧುತ್ವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆ ಹಾಸನ ಘಟಕದ ಸಂಸ್ಥಾಪಕರು ಆಗಮಿಸಿದ ಹಿನ್ನಲೆಯಲ್ಲಿ ನಡೆದ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳು ಅತ್ಯಂತ ಪ್ರಮುಖವಾಗಿದೆ. ಮಾನವನು ಜನ್ಮ ತಾಳಿದ ದಿನದಿಂದ ಸಾಯುವವರೆಗೂ ಮಾನವ ಹಕ್ಕುಗಳು ಅತ್ಯಂತ ಪ್ರಮುಖವಾಗಿ ಬಳಕೆಗೆ ಬರುತ್ತದೆ. ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿವಸ ಆಚರಣೆ ಮಾಡಬೇಕು ಆದರೇ ಕಳೆದ ಎರಡು ವರ್ಷಗಳಿಂದ ಮಾನವ ಹಕ್ಕುಗಳ ದಿನಾಚರಣೆಯನ್ನೇ ಕೈಬಿಟ್ಟಿರುವ ಸ್ಥಿತಿ ಗತಿ ಎದುರಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಇಂದು ಸಮಾಜದಲ್ಲಿ ಮನುಷ್ಯ ಬದುಕಬೇಕಾದರೇ ಮನುಷ್ಯ ತನ್ನ ಜೀವನವನ್ನು ಅಚ್ಚುಕಟ್ಟಾಗಿ ನಡೆಸಲು ಮಾನವ ಹಕ್ಕುಗಳ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಸಹಕಾರಿ ಇಲಾಖೆ ಮತ್ತು ನಾವು ಕೂಡ ಮರೆತು ಬಿಟ್ಟಿದ್ದೇವೆ. ಮಾನವ ಜೀವನವನ್ನು ಉತ್ತಮಗೊಳಿಸಬೇಕಾದರೇ ಹಕ್ಕುಗಳನ್ನು ಮರೆಯಬಾರದು, ಅಂತಹ ಕೆಲಸವನ್ನು ನಮ್ಮ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯು ಕಾರ್ಯನ್ಮುಖವಾಗಿ ಕೆಲಸ ಮಾಡುತ್ತಿದೆ ಎಂದು ಕಿವಿಮಾತು ಹೇಳಿದರು. ಇಂದು ಜಿಲ್ಲಾ ಸಮಿತಿ ಹಾಸನದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, ಮುಂದೆ ತಾಲೂಕುವಾರು, ಇಲಾಖಾವಾರು, ಸಮಾಜವಾರು ಸಮಿತಿ ರಚನೆ ಮಾಡಿ ಸಮಾಜದ ನ್ಯೂನ್ಯತೆ ಮತ್ತು ಆಗುಹೋಗುಗಳನ್ನು ಗಮನಕ್ಕೆ ತಂದುಕೊAಡು ಸಮಾಜಕ್ಕೆ ಮಾನವ ಹಕ್ಕುಗಳ ಕೊಡುಗೆಯನ್ನು ಕಟ್ಟಕಡೆಯ ಜನರಿಗೆ ಮುಟ್ಟಿಸುವ ಕೆಲಸ ಮಾಡುವಂತೆ ಕರೆ ನೀಡಿದರು.
ಇನ್ನು ಈ ಸಮಿತಿಯಲ್ಲಿ ಇರುವವರು ಶಿಸ್ತುಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಏನಾದರೂ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿರುವುದು ಕಂಡು ಬಂದರೇ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆ ವರತು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವ ಕೆಲಸಕ್ಕೆ ಹೋಗಬಾರದು. ಸಮಿತಿಯ ಗೌರವ ಉಳಿಸುವ ಕೆಲಸ ಮಾಡುವಂತೆ ಸಲಹೆಗಳನ್ನು ಇದೆ ವೇಳೆ ನೀಡಿದರು.
ಸಭೆಯಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ಅಧ್ಯಕ್ಷರಾದ ಚನ್ನಕೇಶವ, ಕಾರ್ಯದರ್ಶಿ ಆರ್.ಎಸ್. ರಮೇಶ್, ಉಪಾಧ್ಯಕ್ಷ ಎಸ್.ಇ. ರೇವಣ್ಣ, ನಿರ್ದೇಶಕರಾದ ಹೆಚ್.ಎ. ದಿನೇಶ್, ಮಂಜುನಾಥ್, ಎಸ್.ಡಿ. ರಂಗಸ್ವಾಮಿ, ಎಂ.ಜೆ. ಪ್ರಕಾಶ್, ಬಿ.ಎಚ್. ಧರ್ಮಪ್ಪ ನಾಯಕ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಪರಾಷರ್ ಮೂರ್ತಿ, ನಿಂಗಪ್ಪ ಇತರರು ಪಾಲ್ಗೊಂಡಿದ್ದರು.