ಹೆಚ್.ಡಿ. ರೇವಣ್ಣ : ರಾಜ್ಯದಲ್ಲಿ ಶಿಕ್ಷಣ ಕುಸಿತ ಮೂಲಭೂತ ಸೌಕರ್ಯ ಕಲ್ಪಿಸಲಿ.

ಹಾಸನ : ಶಿಕ್ಷಣವು ಖಾಸಗಿಯವರ ಹಿಡಿತದಲ್ಲಿ ಇರುವುದರಿಂದ ಸರಕಾರಿ ಶಿಕ್ಷಣವು ರಾಜ್ಯದಲ್ಲಿ ಕುಸಿಯುತ್ತಿದ್ದು, ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.

        ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರö್ಯ ಬಂದು 75 ವರ್ಷಗಳೆ ಕಳೆದು ಹೋದರೂ ಇನ್ನು ಸರಿಯಾದ ರೀತಿ ರಾಜ್ಯದಲ್ಲಿ ಶಿಕ್ಷಣ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. ಎಲ್ಲಾ ಶಿಕ್ಷಣವು ಖಾಸಗಿಯವರ ಹಿಡಿತದಲ್ಲಿದೆ ಆತಂಕವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಸರ್ಕಾರದ ವತಿಯಿಂದ 431 ಸರ್ಕಾರಿ ಪ್ರಥಮದರ್ಜೆ

ಕಾಲೇಜುಗಳಿವೆ. 85 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಹಾಗೂ 14 ಸರ್ಕಾರಿ ಇಂಜಿನಿಯರಿAಗ್

ಕಾಲೇಜುಗಳಿವೆ. 528 ಸಂಸ್ಥೆಗಳಿದ್ದು, ಸುಮಾರು 4.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 

ಕಳೆದ ಒಂದು ದಶಕಗಳಿಂದ ಈ ಸರ್ಕಾರಿ ಸಂಸ್ಥೆಗಳಲ್ಲಿ ಸ್ವಂತ ಕಟ್ಟಡ, ತರಗತಿ ಕೊಠಡಿಗಳು, ಪ್ರಯೋಗಾಲಯ & ವರ್ಕಶಾಪ್‌ಗಳು, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳು, ಗ್ರಂಥಾಲಯಗಳು, ಕಂಪ್ಯೂಟರ್ ಲ್ಯಾಬ್‌ಗಳ ಕೊರತೆಯಿಲ್ಲದೆ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ. 525 ಪ್ರಾಂಶುಪಾಲರ ಹುದ್ದೆಗಳಿಗೆ ಕೇವಲ 70 ಹುದ್ದೆಗಳು ಭರ್ತಿಯಾಗಿವೆ. 456 ಹುದ್ದೆಗಳು ಖಾಲಿ ಇದ್ದು, 

15,318 ಬೋಧಕರ ಹುದ್ದೆಗಳಿದ್ದು, 12,302 ಹುದ್ದೆಗಳು ಭರ್ತಿಯಾಗಿವೆ. 3 ಸಾವಿರ ಬೋಧಕರ ಹುದ್ದೆಗಳು ಖಾಲಿ ಇದೆ. 19,030 ಬೋಧಕೇತರ ಹುದ್ದೆಗಳು ಮಂಜೂರಾಗಿ ಈ ಪೈಕಿ ಕೇವಲ 7,572 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 11458 ಬೋಧಕೇತರ ಹುದ್ದೆಗಳು ಖಾಲಿ ಇದೆ ಎಂದರು. 

ಈ ಸಂಸ್ಥೆಗಳಲ್ಲಿ ಕಟ್ಟಡ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಲು 2053 ತರಗತಿ ಕೊಠಡಿಗಳು ಇದ್ದು, 1620 ಪ್ರಯೋಗಾಲಯ ಮತ್ತು ವರ್ಕಷಾಪ್‌ಗಳು, 1805 ಶೌಚಾಲಯಗಳು, 661

ಮಹಿಳಾ ನಿರೀಕ್ಷಕರ ಕೊಠಡಿಗಳು, 272 ಗ್ರಂಥಾಲಯ ಕೊಠಡಿಗಳು 1304 ಅನುಷ್ಠಾನದಲ್ಲಿರುವ

ಮುಂದುವರಿದ ಕಾಮಗಾರಿಗಳು ಒಟ್ಟು 4042 ಕಾಮಗಾರಿಗಳನ್ನು ನಿರ್ಮಿಸಲು ಒಟ್ಟು ರೂ. 2,431 ಕೋಟಿಗಳ ಅಗತ್ಯವಿದೆ. ಜೊತೆಗೆ ಕೊರತೆ ಇರುವ ಮೂಲಸೌಕರ್ಯಗಳನ್ನು ಕಲ್ಪಿಸಲು 625.34 ಕೋಟಿಗಳ ಅಗತ್ಯವಿದೆ.

2021-22ನೇ ಸಾಲಿನಲ್ಲಿ ರೂ. 3758 ಕೋಟಿ ರೂಗಳ ಒದಗಿಸುವಂತೆ ಉನ್ನತ ಶಿಕ್ಷಣ ಇಲಾಖೆ ಆರ್ಥಿಕ

ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ರಾಜ್ಯ ಸರ್ಕಾರ 2021-22ನೇ ಸಾಲಿನ ಆಯ-ವ್ಯಯದಲ್ಲಿ ಒಟ್ಟು 483.70 ಕೋಟಿರೂ.ಗಳನ್ನು ಮಾತ್ರ ಉನ್ನತ ಶಿಕ್ಷಣ ಇಲಾಖೆಯ ವಿವಿಧ ಲೆಕ್ಕಶೀರ್ಷಿಕೆಯಲ್ಲಿ ನೀಡಿದೆ. 

       ಅಗತ್ಯವಿರುವ ಬೋಧಕರ ಹುದ್ದೆಗಳನ್ನು ಸರ್ಕಾರದ ಭರ್ತಿ ಮಾಡಿಲ್ಲ ಕಾಲೇಜು ಶಿಕ್ಷಣ ಇಲಾಖೆಯಲ್ಲಿ 14682 ಅತಿಥಿ ಉಪನ್ಯಾಸಕರು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 1209 ಉಪನ್ಯಾಸಕರು, ವಿಶ್ವವಿದ್ಯಾನಿಲಯಗಳಲ್ಲಿ 2704 ಒಟ್ಟು 18595 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ವಿಫಲವಾಗಿರುವುದು ದುರದೃಷ್ಟಕರ ಎಂದರು. ಈ ಬಗ್ಗೆ ನಾನು ಅಸೆಂಬ್ಲಿಯಲ್ಲಿ ಮಾತನಾಡಿ ಕನಿಷ್ಟ 2 ಸಾವಿರ ಕೋಟಿ ರೂಗಳನ್ನಾದರೂ ಅನುಧಾನ ಕೊಡುವಂತೆ ಸರಕಾರವನ್ನು ಆಗ್ರಹಿಸಲಾಗುವುದು. ಕೂಡಲೇ ಸರ್ಕಾರ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.


Post a Comment

Previous Post Next Post