ಹಾಸನ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸ್ಥಳೀಯ ಶಾಸಕರ ಮನವಿಗಾಗಿ ಎತ್ತಿನಹೊಳೆ ಕಾಮಗಾರಿಗೆ ಭೂಮಿ ಸ್ವಾಧೀನ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಸೂಕ್ತ ಪರಿಹಾರ ಕೊಡದಿದ್ದರೇ ಕುಟುಂಬ ಸಮೇತರಾಗಿ ಡಿಸಿ ಕಛೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಅರಸೀಕೆರೆ ಸುತ್ತ ಮುತ್ತ ಭೂಮಿ ಕಳೆದುಕೊಂಡವರು ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ಮನವಿ ಸಲ್ಲಿಸಿದರು.
ಎತ್ತಿನಹೊಳೆ ಕಾಮಗಾರಿಯನ್ನು 2016-17 ರಲ್ಲಿ ಆರಂಭಗೊAಡಿದು, ಈಗ ಬಹುತೇಕ ಕೆಲಸ ಮುಗಿಯುತ್ತ ಬಂದಿದೆ. ಅರಸೀಕೆರೆ ತಾಲೂಕಿನಲ್ಲಿ ಸುಮಾರು 1050 ಎಕರೆ ಜಮೀನನ್ನು ಭೂಸ್ವಾಧೀನ ಮಾಡಲಾಗಿದ್ದು, ಇದುವರೆಗೂ ಶಾಶ್ವತ ಭೂ ಪರಿಹಾರ ಬಂದಿರುವುದಿಲ್ಲ. ಈವರೆಗೆ ಅಂದಾಜು 50 ರಿಂದ 60 ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಭೂ-ಸ್ವಾಧೀನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಭೂಮಿ ಪರಿಹಾರದ ಬೆಲೆ ನಿಗಧಿಪಡಿಸಿರುವುದಿಲ್ಲ ಎಂದು ದೂರಿದರು. ಹಳ್ಳಿ-ಹಳ್ಳಿಗೂ ಪ್ರತ್ಯೇಕ ಧರ ನಿಗಧಿ ಮಾಡಲಾಗುತ್ತಿದ್ದು, ರೈತರುಗಳು ಎ ರೂಪದ ಪರಿಹಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿರುವುದಿಲ್ಲ. ಇನ್ನು ತೆಂಗಿನ ಮರಗಳಿಗೆ ಒಂದೊAದು ಕಡೆ ವಿಭಿನ್ನ ಧರ ನಿಗಧಿ ಮಾಡುವ ಮೂಲಕ ಅವೈಜ್ಞಾನಿಕವಾಗಿ ಬೆಲೆ ನಿಗಧಿ ಮಾಡುವ ಮೂಲಕ ತಾರತಾಮ್ಯ ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಎತ್ತಿನಹೊಳೆ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ಅರಸೀಕೆರೆ ಸುತ್ತ ಮುತ್ತ ರೈತರಾದ ಗ್ರಾಮದ ಮಾಜಿ ಅಧ್ಯಕ್ಷ ಕರೀಂ ಸಾಬ್, ಕುಮಾರಸ್ವಾಮಿ, ಡಿ.ಟಿ. ಸಿದ್ದರಾಮಯ್ಯ, ರಾಜು, ಸಿದ್ದಣ್ಣ, ರವಿಕುಮಾರ್, ಪ್ರಸಾದ್, ಜವರೇಗೌಡ, ಗಂಗಪ್ಪ, ತಿಮ್ಮಪ್ಪ, ಶಂಕರಪ್ಪ ಇತರರು ಇದ್ದರು.