ದೇವರ ಮೇಲಾದ್ರೂ ಆಣೆ ಮಾಡ್ತೇನೆ ನಾನು ಏಕಪತ್ನಿವ್ರತಸ್ಥ- ಶಿವಲಿಂಗೇಗೌಡ ಆಕ್ರೋಶ

ಬೆಂಗಳೂರು: ನಾಯಕರ ಚಾರಿತ್ರ್ಯ ಬಗ್ಗೆ ಸವಾಲು ಹಾಕಿದ್ದ ಆರೋಗ್ಯ ಸಚಿವ ಸುಧಾಕರ್ ಅವರ ಹೇಳಿಕೆಗೆ ಆಕ್ರೋಶ ಹೊರ ಹಾಕಿರುವ ಜೆಡಿಎಸ್​ ಶಾಸಕ ಶಿವಲಿಂಗೇಗೌಡ, ದೇವರ ಮೇಲಾದ್ರೂ ಆಣೆ ಮಾಡ್ತೇನೆ ನಾನು ಏಕಪತ್ನಿವ್ರತಸ್ಥ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ನಾನು ಯಾವ ದೇವರ ಮೇಲಾದ್ರೂ ಆಣೆ ಮಾಡ್ತೇನೆ. ನನಗೆ ಒಬ್ಬಳೇ ಹೆಂಡತಿ, ನಾನು ಯಾವ ಅನೈತಿಕ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ಅವರ ಹೇಳಿಕೆ ತಪ್ಪು, ನೂರಕ್ಕೆ ನೂರು ನಾವು ಏಕ ಪತ್ನಿ ವೃತಸ್ಥರೇ ಎಂದರು.

ಸಚಿವ ಸುಧಾಕರ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಾಗಾದ್ರೆ ಇವರು ಇನ್ನು ಸಂಬಂಧ ಇಟ್ಟುಕೊಂಡಿದ್ದಾರಾ..? ಹೀಗೆ ಮಾತನಾಡಬಾರದು, ಅದು ತಪ್ಪಾಗುತ್ತೆ. ಅವರನ್ನೂ ಸೇರಿಸಿಕೊಂಡು ಅವರು ಹೇಳಿದ್ದಾರೆ ಎಂದರೇ ಯಾರ ಮೇಲೆ ಅನುಮಾನ ಮಾಡೋದು ಎಂದು ಪ್ರಶ್ನೆ ಮಾಡಿದರು.

Post a Comment

Previous Post Next Post