ಹಾಸನ ಜಿಲ್ಲೆಗೆ ಮತ್ತೆ ಕೋವಿಡ್ ಎರಡನೇ ಅಲೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನೆನ್ನೆ ಗುರುವಾರ ಒಟ್ಟು ೪೪ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳು ದ್ವಿಶತಕದ ಗಡಿ ದಾಟುತ್ತ ಹೋಗುತ್ತಿದೆ. ಪ್ರಸ್ತುತ ಒಟ್ಟು ಸೋಂಕಿತರ ಸಂಖ್ಯೆ ೨೯೧೭೦ಕ್ಕೆ ಏರಿಕೆಯಾಗಿದ್ದು, ೨೮೪೦೪ ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ೨೯೭ ಸಕ್ರಿಯ ಪ್ರಕರಣಗಳ ಪೈಕಿ ೮ ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಗೂ ಕಳೆದ ಎರಡು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಮತ್ತೊಮ್ಮೆ ಸನ್ನದ್ಧರಾಗಬೇಕಾದ ಪರಿಸ್ಥಿತಿ ನರ‍್ಮಾಣವಾಗಿದೆ. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಹೊಸದಾಗಿ ಆಲೂರು ೬, ಅರಕಲಗೂಡು ೪, అరెసిఁణిరి ೫, ಬೇಲೂರು ೧, ಚನ್ನರಾಯಪಟ್ಟಣ ೩, ಹಾಸನ ೧೮, ಹೊಳೆನರಸೀಪುರ ೩, ಸಕಲೇಶಪುರ ೨ ಹಾಗೂ ಇತರೆ ಜಿಲ್ಲೆಯ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
