ಬೇಸಿಗೆ ಕಾಲದಲ್ಲಿ ಅನೇಕ ಪ್ರಾಣಿಸಂಕುಲಗಳಿಗೆ ನೀರಿನ ವ್ಯವಸ್ಥೆ ಬೇಕಾಗುತ್ತದೆ.. ಈ ಯೋಜನೆಯನ್ನು ಪ್ರತಿಯೊಂದು ಗ್ರಾಮಪಂಚಾಯಿತಿಯಲ್ಲಿ ಬರುವ ಹಳ್ಳಿಗಳಲ್ಲಿ ನಿರ್ಮಾಣ ಮಾಡಬೇಕು ಹಾಗೂ ಹಿಂದೆ ಮಾಡಿರುವ ಜಾನುವಾರು ಕುಡಿಯುವ ನೀರಿನ ತೊಟ್ಟುಗಳನ್ನು ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಮಾಡಬೇಕೆಂದು, ಊರಿನ ಗ್ರಾಮಸ್ಥರಿಗೆ ಜಾನುವಾರು ಕುಡಿಯುವ ನೀರಿನ ತೊಟ್ಟಿ ಹತ್ತಿರ ಜಾನುವಾರುಗಳನ್ನು ತೊಳೆಯುವುದು, ಬಟ್ಟೆ ತೊಳೆಯುವುದು, ವಾಹನಗಳನ್ನು ತೊಳೆಯುವುದು ಮುಂತಾದ ಕೆಲಸಗಳನ್ನು ಮಾಡದಂತೆ ಸೂಚಿಸುವುದು.
ಹಳ್ಳಿಗಳಲ್ಲಿ ನೀರಿನ ಕೊರತೆಯಿಂದ ಯಾವುದೇ ಗ್ರಾಮಸ್ಥರಿಗೆ, ಜಾನುವಾರುಗಳಿಗೆ, ಹಾಗೂ ಸಂಚಾರಿಗಳಿಗೆ ತೊಂದರೆ ಆಗದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಅದ್ಯಕ್ಷರು, ಸದಸ್ಯರು ನೋಡಿಕೊಳ್ಳಬೇಕೆಂದು,
ಸಾರ್ವಜನಿಕ ಪ್ರದೇಶಗಳಲ್ಲಿ ಸಂಚಾರಿಗಳಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು
ಇನ್ನು ಬೇಸಿಗೆ ಕಾಲವಾಗಿರುವುದರಿಂದ ಮರ ಗಿಡ ಬಳ್ಳಿ ಹಾಗೂ ಹುಲ್ಲು ಒಣಗಿರುತ್ತವೆ ಇಂತಹ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ಹಾದುಹೋಗುತ್ತದೆ ಇಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಿಡಿ ಕಾರಿದರು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವ ಸಾದ್ಯತೆ ಇರುತ್ತದೆ ಆದ್ದರಿಂದ ಗ್ರಾ ಪಂ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಇಂತಹ ಸ್ಥಳಗಳ ಬಗ್ಗೆ ಕೆ ಇ ಬಿ ರವರ ಬಳಿ ಮಾತನಾಡಿ ಎಚ್ಚರವಹಿಸುವುದರ ಜೊತೆಗೆ ಅವರ ಜೊತೆ ಕೈ ಜೋಡಿಸಬೇಕೆಂದು ಕೇಳಿಕೊಳ್ಳುತ್ತೇನೆ.
Tags
ಕೃಷಿ