ಬಿಳಿ ಪ್ಯಾಕೇಟ್ ನಂದಿನಿ ಹಾಲು
ಬೇಲೂರು: ಹಾಸನ ಹಾಲಿನ ಡೈರಿಯಿಂದ ಬಿಳಿ ಪ್ಯಾಕೇಟಿನಲ್ಲಿ ಸರಬರಾಜು
ಆಗುತ್ತಿರುವ ನಂದಿನಿ ಹಾಲು ಗುಣಮಟ್ಟದಲ್ಲಿ ನ್ಯೂನ್ಯತೆ ಇರುವ
ಬಗ್ಗೆ ಆರೋಪ ಕೇಳಿಬರುತ್ತಿದೆ.
ಬಿಳಿ ಬಣ್ಣದ ಪ್ಯಾಕೇಟ್‍ನಲ್ಲಿ ಇರುವ ಹಾಲನ್ನು ಕಾಯಿಸಿದಾಗ
ಕೆಂಪು ಬಣ್ಣದಲ್ಲಿ ಕೆನೆ ಕಟ್ಟುತ್ತದೆ, ಆನಂತರ ಹಾಲು ಗಟ್ಟಿ ಇರದೆ
ತೆಳುಪಾಗುತ್ತದೆ ಮತ್ತು ಜಿಡ್ಡಿನಂತಾಗುತ್ತದೆ ಎಂಬುದು
ಗ್ರಾಹಕರಿಂದ ಕೇಳಿಬರುತ್ತಿರುವ ದೂರು.
ಬಲ್ಲಮೂಲಗಳ ಪ್ರಕಾರ ನಂದಿನ ಹಾಲಿನ ಬಿಳಿಬಣ್ಣದ
ಪ್ಯಾಕೇಟ್‍ಗೆ ಹಾಲನ್ನು ತುಂಬುವ ಯಂತ್ರ ಕೆಟ್ಟಿದ್ದು
ಪರ್ಯಾಯವಾಗಿ ನೀಲಿ ಬಣ್ಣದ ಪ್ಯಾಕೇಟಿನ ಹಾಲನ್ನೇ ಬಿಳಿಬಣ್ಣದ
ಪ್ಯಾಕೇಟ್‍ಗೆ ತುಂಬಿಸಿ ಕಳುಹಿಸಲಾಗುತ್ತಿದೆ ಎನ್ನಲಾಗಿದೆ. ಆದರೆ
ನೀಲಿ ಪ್ಯಾಕೇಟ್ ಹಾಲಿಗೂ ಬಿಳಿಬಣ್ಣದ ಪ್ಯಾಕೇಟ್ ಹಾಲಿಗೂ 2 ರೂ. ವ್ಯತ್ಯಾಸವಿದ್ದು, ಎಂದಿನ ಬೆಲೆಯಂತೆ 2 ರೂ. ಹೆಚ್ಚು
ಪಡೆಯಲಾಗುತ್ತಿದೆ ಎಂಬ ಆರೋಪಗಳು ಗ್ರಾಹಕರಿಂದ
ಕೇಳಿಬರುತ್ತಿದೆ. ವಾಸ್ತವ ಸಂಗತಿಗೆ ಸಂಬಂಧಿಸಿದ ಅಧಿಕಾರಿಗಳೆ
ಸ್ಪಷ್ಟಪಡಿಸಬೇಕಿದೆ.
Tags
ಬೇಲೂರು