ರಾಷ್ಟ್ರೀಯ ಪೋಷಣಾ ಅಭಿಯಾನ ರಥಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಚಾಲನೆ.

 ಹಾಸನ: ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಪೋಷಣಾ ಅಭಿಯಾನ ರಥಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.


      ನಂತರ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ ಪೋಷಣ ಅಭಿಯಾನವು ಅಪೌಷ್ಟಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಮುಖ್ಯವಾಗಿ ಈ ಯೋಜನೆಯು ಅಂಗನವಾಡಿ ಕೇಂದ್ರಗಳ ಮೂಲಕ ಕೇಂದ್ರೀಕೃತವಾಗಿದ್ದು ( 0-6 ವರ್ಷದ ಮಕ್ಕಳು ಹಾಗೂ ಕಿಶೋರಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವುದು. ಕಡಿಮೆ ತೂಕದ ಮಕ್ಕಳ ಜನನವನ್ನು ಕಡಿಮೆಗೊಳಿಸುವುದು, ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರಕ್ತಹೀನತೆಯನ್ನು ಕಡಿಮೆಗೊಳಿಸುವುದು, ಕುಂಠಿತ ಬೆಳವಣಿಗೆಯನ್ನು ತಡೆಗಟ್ಟುವುದು ಹಾಗೂ ಕಡಿಮೆಗೊಳಿಸುವುದು ಉದ್ದೇಶವಾಗಿದೆ ಎಂದರು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಗುರುತಿಸುವಿಕೆ, ಅದರ ನಿರ್ವಹಣೆ ಹಾಗೂ ಅಂಗನವಾಡಿಗಳಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿ ಜನರು ವಿಟಮಿನ್ ಮತ್ತು ಖನಿಜ ಖನಿಜಾಂಶಗಳನ್ನು ರಕ್ಷಕಾಂಶಗಳನ್ನು ನೀಡುವ ತಾಜಾ ಹಣ್ಣು ತರಕಾರಿ ಸೊಪ್ಪುಗಳನ್ನು ತಮ್ಮ ಮನೆಯಲ್ಲೇ ಬೆಳೆದು ಜೀವಿಗಳು ಪ್ರೋತ್ಸಾಹಿಸಬೇಕು. .ಅಂಗನವಾಡಿಗಳಲ್ಲಿ ನೀಡುವ ವಿವಿಧ ಸೇವೆಗಳ ವಿವರಗಳನ್ನು ಅನ್ ಲೈನ್ ನಲ್ಲಿ ದಾಖಲಿಸುವ ಸಂಬAಧ ಮೊಬೈಲ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಐ.ಸಿ.ಡಿ.ಎಸ್ ಮೇಲ್ವಿಚಾರಕಿಯರಿಗೆ ಪೂರೈಸಿ ಸೂಕ್ತ ತರಬೇತಿ ಮಾರ್ಗದರ್ಶನ ಮೂಲಕ ಆಂಗನವಾಡಿಗಳ ಮೂಲಭೂತ ಸೌಕಯ್ಯಗಳು ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ದಾಬಿಲಾತಿಗಳನ್ನು ಆಳದಲಿಸುವ ಬಗ್ಗೆ ಸರ್ಕಾರದಿಂದ ಈಗಾಗಲೇ ಹಾಸನ ಜಿಲ್ಲೆಗೆ 2614 ಮೊಬೈಲ್ ಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದರು.

      ಇದೆ ವೇಳೆ ಅಪರ ಜಿಲ್ಲಾಧಿಕಾರಿ ಕವಿತರಾಜರಾಂ, ಇಲಾಖೆಯ ಮಲ್ಲೇಶ್ ಗೌಡ, ದಿಲೀಪ್, ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post