ಬೆಂಗಳೂರು- ಧರ್ಮಸ್ಥಳ ಪುಣ್ಯಕ್ಷೇತ್ರದಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆದೂರವಾಗಿದೆ. ಈ ಹೇಳಿಕೆಯನ್ನು ಜಾಗೃತ ಭಕ್ತ ಸಮುದಾಯ ವ್ಯಾಪಕವಾಗಿಖಂಡಿಸುತ್ತದೆ.
ಗುರುವಾಯನಕೆರೆಯ ಸೋಮನಾಥ ನಾಯಕ್‌ಎನ್ನುವ ವ್ಯಕ್ತಿಕೆಲ ದಿನಗಳಿಂದ ಸಾಮಾಜಿಕಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರುಇಂತಹಯಾವುದೇ ಹುನ್ನಾರ ಮಾಡಿಲ್ಲಎಂದುಕನಕ ಸದ್ಭಾವನಜ್ಯೋತಿರಥಯಾತ್ರೆ ಸಮಿತಿರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ತುಳು ಸಾಹಿತ್ಯಅಕಾಡೆಮಿಅಧ್ಯಕ್ಷದಯಾನಂದ್‌ಕತ್ತಲ್ ಸಾರ್, ಕರವೇ ನಗರಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರಎನ್.ವಿ. ಲಕ್ಷಿö್ಮನಾರಾಯಣಆದ ನಾವುಗಳು ಹೇಳುತ್ತಿದ್ದೇವೆ.
ಅಪಪ್ರಚಾರ ಮಾಡುವ ಗುರುವಾಯನಕೆರೆಯ ಸೋಮನಾಥ್ ನಾಯಕ್ ಅಂತಹ ವ್ಯಕ್ತಿಗಳಿಗೆ ಸತ್ಯಾಂಶವನ್ನು ತಿಳಿಸಿಕೊಡುವುದೇ ನಮ್ಮಉದ್ದೇಶ.ಈ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸುವುದೇನೆಂದರೆಕ್ಷೇತ್ರಕ್ಕೆ ಸಂಬAಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದಾಗ ೧೯೭೦ ರದಶಕದಿಂದ ೨೦೨೧ ರ ವರೆಗೆದಸ್ತಾವೇಜ್ ನಲ್ಲಿದಾಖಲಾಗಿರುವಅಂದರೆ ೫೧ ವರ್ಷದ ಖಖಿಅ/ಪಹಣಿ ಪತ್ರಿಕೆಗಳನ್ನು ಕೂಲಂಕುಷವಾವಾಗಿ ಪರಿಶೀಲಿಸಿ ನೋಡಿದಾಗ ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲ.
ಬೆಳ್ತAಗಡಿ ಭೂ-ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ ಅದರಲ್ಲಿಯೂಕೂಡದೇವರ ಹೆಸರಿನಲ್ಲಿರುವ ಆಸ್ತಿಯನ್ನು ಹೆಗ್ಗಡೆಯವರುತಮ್ಮ ಹೆಸರಿಗೆ ನೋಂದಾಯಿಸಿಕೊAಡಿರುವAತಹ ಯಾವುದೇಕೃತ್ಯದಉಲ್ಲೇಖಇರುವುದಿಲ್ಲ. ಬದಲಾಗಿ ಹೆಗ್ಗಡೆಯವರಲ್ಲಿ ಹೆಚ್ಚುವರಿಜಮೀನುಇಲ್ಲಅಂದರೆ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿಇಲ್ಲ.
ಎಲ್ಲವೂ ಪಾರದರ್ಶಕವಾಗಿದ್ದು ಸದರೀ ಸರ್ಕಾರದ ದಸ್ತಾವೇಜಿನ ದಾಖಲೆಯಲ್ಲಿ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ ಎನ್ನುವ ಆದೇಶ ಮಾತ್ರ ಇದೆ. ವಾಸ್ತವಿಕತೆ ಹೀಗೆ ‘ಮಿತಿಗಿಂತ ಜಾಸ್ತಿ ಇಲ’್ಲ ಎಂಬ ಅಂಶ ಕಂಡು ಬಂದಿದೆ ಆದರೆ ಸೋಮನಾಥ ನಾಯಕ್ ಎನ್ನುವವರು ನಿರಾಧಾರ ರಹಿತ ಆರೋಪ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ.
ಸತ್ಯದ ತಲೆ ಮೇಲೆ ಹೊಡೆಯಲು ಹೋಗಿರುವುದು ಅಕ್ಷಮ್ಯ ಅಪರಾಧವಾಗಿದೆ ಇದನ್ನು ಬಿಟ್ಟುಕೊಟ್ಟು ಸತ್ಯದದರ್ಶನ ಮಾಡಿಕೊಳ್ಳುವುದು ಅಗತ್ಯವಾಗಿದೆ ಅಲ್ಲವೇ.
ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಮೈಸೂರು ಹೈಕೋರ್ಟ್ ಆದೇಶದಲ್ಲಿಯೂ ಕೂಡ ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದವರಾಗಿದ್ದಾರೆ. ಎನ್ನುವ ಉಲ್ಲೇಖಕೂಡ ಇದೆ ಈ ಮೂರ್ಖ ಶಿಖಾಮಣಿಗಳು ಇದನ್ನು ಅವಲೋಕಿಸಿದಂತೆ ಕಾಣುವುದಿಲ್ಲ ಎಂಬ ಸಂಶಯ ಮೂಡುತ್ತದೆ.
ರಾಜ್ಯದಯಾವುದೇ ದಾಖಲೆ ನೋಡಿದರೂ ದೇವರ ಆಸ್ತಿಯನ್ನು ಹೆಗ್ಗಡೆಯವರು ಬರೆಸಿಕೊಂಡಿದ್ದಾರೆ ಎಂಬ ಅಂಶ ಕಂಡು ಬರುವುದಿಲ್ಲ. ಅಲ್ಲದೇತಮ್ಮ ಹತ್ತಿರಇರುವ ಸಾವಿರಾರುಎಕರೆ ಭೂಮಿಯನ್ನು ಈಗಾಗಲೇ ಬಡವರಿಗೆ ಹಂಚಿರುವ ಹೆಗ್ಗಡೆಯವರು ಜಾತ್ಯಾತೀತ ಮನೋಧರ್ಮ ಭಾವವುಳ್ಳವರಾಗಿರುವ ಪೂಜ್ಯರು ಇಂದಿಗೂ ಕೂಡ ಮಾನವ ಧರ್ಮೋದ್ಧಾರಕರಾಗಿದ್ದಾರೆ
ನೇತ್ರಾವತಿ ತಟದಲ್ಲಿರುವ ಧರ್ಮಸ್ಥಳದ ಶ್ರೀ ಕ್ಷೇತ್ರ ಸಾರಿ ಸಾರಿ ಹೇಳುತ್ತ ಬಂದಿದೆ.ಆರೋಪ ಮಾಡುವವರ ಚರಿತ್ರೆಯನ್ನು ಜಾಲಾಡಿದಾಗ ಇದರ ಹಿಂದೆಕಾಣದ ಕೈಗಳ ನಿಗೂಢವಾದ ರಹಸ್ಯವೇ ಇದೆ.ಆರೋಪ ಮಾಡಿದವರಚರಿತ್ರೆಕೆದಕುತ್ತ ಸಾಗಿದಂತೆ ಅವರ ಕರ್ಮಕಾAಡ ಹೇಳತೀರದು. ಬಡವರನ್ನು ವಂಚಿಸಿ ಸರಕಾರವನ್ನೂ ವಂಚಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವ ಆರೋಪಗಳಿವೆ.
ಧರ್ಮಸ್ಥಳ ಧರ್ಮಾಧಿಕಾರಿಡಾ. ವಿರೇಂದ್ರ ಹೆಗಡೆಯವರ ಮೇಲೆ ಅನಗತ್ಯಆರೋಪ ಮಾಡುತ್ತಿರುವಇವರಉದ್ದೇಶ ಬೇರೆಯದೇಇದೆ. ಮತ್ತೊಮ್ಮೆ ಇಂತಹ ಆಧಾರ ರಹಿತ ಹಾಗೂ ಸತ್ಯಕ್ಕೆದೂರವಾದ ಆರೋಪ ಮಾಡಬಾರದೆಂದು ಈ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ.
