ಹಾಸನ: ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವು ನಿರ್ವಹಣೆಯಿಲ್ಲದೇ ಸೊರಗುತ್ತಿದೆ.
ಜಿಲ್ಲೆಯ ಕ್ರೀಡಾಂಗಣದಲ್ಲಿ ಹಲವು ವರ್ಷಗಳ ಹಿಂದೆ ಪುರುಷರು ಹಾಗೂ ಮಹಿಳೆಯರು ಉಪಯೋಗಿಸಲು ಅನುಕೂಲವಾಗುವಂತೆ ಸುಮಾರು ₹20 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ, ನಿರ್ವಹಣೆಯಿಲ್ಲದ ಕಾರಣ, ಶೌಚಾಲಯವು ಬಳಕೆಯಿಂದ ದೂರ ಉಳಿದಿದ್ದು, ಕ್ರೀಡಾ ಪಟುಗಳು ಪರದಾಡುವಂತಾಗಿದೆ.
ಈ ಶೌಚಾಲಯದ ಮೂತ್ರ ವಿಸ ರ್ಜನೆ ಸಿಂಕ್‌ಗಳ ಪೈಪ್‌ಗಳು ಹಾನಿಯಾ ಗಿದ್ದು, ಮೂತ್ರ ಕೊಠಡಿಯೊಳಗೇ ಸಂಗ್ರಹವಾಗುತ್ತಿದೆ. ಶೌಚಾಲಯದೊಳಗೆ ಮದ್ಯದ ಬಾಟಲಿಗಳು ರಾಶಿ ಬಿದ್ದಿದ್ದು, ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿವೆ.
ಕ್ರೀಡಾಂಗಣದ ದ್ವಾರದಲ್ಲಿ ಇರುವ ಶೌಚಾಲಯ 20ಲಕ್ಷದಲ್ಲಿ ನಿರ್ಮಾಣವಾಗಿದ್ದು ಈಶಾನ್ಯ ಮೂಲೆಯಲ್ಲಿದೆ ಎನ್ನುವ ಕಾರಣಕ್ಕೆ ಅದರ ಬಳಕೆಯು ಸಂಪೂರ್ಣವಾಗಿ ನಿಂತು ಹೋಗಿದೆ. ಆದ್ದರಿಂದ ಸಾರ್ವಜನಿಕರಿಗೆ ಇಲ್ಲಿಯ ಶೌಚಾಲಯವನ್ನೇ ಬಳಸಬೇಕಿದೆ. ಆದರೆ, ಅವರು ನಿರ್ವಹಣೆ ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜಿಸುವಂತಾಗಿದೆ.
‘ಕ್ರೀಡಪಟುಗಳು ನೂರಾರು ಮಂದಿ ದಿನನಿತ್ಯದ ಬರುತ್ತಾರೆ. ಸಾರ್ವಜನಿಕ ಶೌಚಾಲಯವಿಲ್ಲದೇ ಶಾಚಲಯದ ಹಿಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಜಿಲ್ಲಾ ಕ್ರೀಡಾಂಗಣ ಬಳಿಯೇ ಇಂತಹ ಪರಿಸ್ಥಿತಿಯಾದರೆ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗುವುದಾದರೂ ಹೇಗೆ? ಕೂಡಲೇ ಶೌಚಾಲಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶೌಚಾಲಯವು ನಿರ್ವಹಣೆಯಿಲ್ಲದೇ ಗಬ್ಬು ನಾರು ತ್ತಿರುವುದರಿಂದ ಸರ್ವಾಜನಿಕರು ಇಡೀ ದಿನ ಮೂಗು ಮುಚ್ಚಿಕೊಂಡು ಓಡಾಡುವ ವಂತಾಗಿದೆ’ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.