ಹಾಸನ ಏ ೨೧ ಕೋವಿಡ್ ೧೯ ದೇಶಾದ್ಯಂತ ಪುನಃ ಹೆಚ್ಚಾಗಿದ್ದು, ಹಾಸನ ಜಿಲ್ಲೆಯು ಅದಕ್ಕೆ ಹೊರತಾಗಿಲ್ಲ. ಕೋವಿಡ್ ೧೯ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳಾದ: ಕಡ್ಡಾಯವಾಗಿ ಮಾಸ್ಕ್ ಧರಿಸುವುದು,ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳಬೇಕು.
ಕೇಂದ್ರ ಸರ್ಕಾರವು ಕೋವಿಡ್ -೧೯ ಲಸಿಕಾ ಯೋಜನೆ ಆರಂಭಿಸಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಪ್ರಸ್ತುತ ಕೋವಿಶೀಲ್ಡ್ ಲಸಿಕೆ ( ಸೀರ ಮ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯಾ ಪುಣೆ ) ಕೊವ್ಯಾಕ್ಸಿನ್ ಲಸಿಕೆ ( ಭಾರತ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್, ಹೈದರಾಬಾದ್ ) ಗಳನ್ನು ನೀಡಲಾಗುತ್ತಿದೆ. ಎರಡು ಲಸಿಕೆಗಳನ್ನು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟಾ÷್ಯಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್(ಸಿ. ಡಿ. ಎಸ್. ಕೊ ) ಅನುಮೋದಿಸಿದೆ.
ಲಸಿಕೆಗಳನ್ನು ಪಡೆಯಲು ಅರ್ಹರಾದವರು ಎಂದರೆ :
ಪ್ರಸ್ತುತ ೪೫ ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಕೋವಿ ಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಕೋವಿ ಶೀಲ್ಡ್ ಅಥವಾ ಕೋ ವ್ಯಾಕ್ಸಿನ್ ಲಸಿಕೆಯನ್ನು ಪಡೆಯಬಹುದು. ದೀರ್ಘ ಕಾಲದ ಕಾಯಿಲೆಗಳು ಅಥವಾ ಹೃದಯ, ನರಮಂಡಲ, ಶ್ವಾಸಕೋಶ, ಮೂತ್ರ ಪಿಂಡದ ಅಸ್ವಸ್ಥತೆಗಳನ್ನು ಹೊಂದಿದ್ದರೂ ಸಹ ಕೋವಿಡ್ -೧೯ ಲಸಿಕೆ ಪಡೆದುಕೊಳ್ಳಬಹುದು. ಡಯಬಿಟೀಸ್, ಅಧಿಕ ರಕ್ತದೊತ್ತಡ, ಅಸ್ತಮಾ ಅಥವಾ ಥೈರಾಯ್ಡ್ ಕಾಯಿಲೆ ಹೊಂದಿದ್ದರೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ ಕೋವಿಡ್ ೧೯ ಲಸಿಕೆ ಪಡೆದುಕೊಳ್ಳಬಹುದು. ಇಮ್ಯುನೋ ಡಿಫಿಷಿಯೆನ್ಸಿ, ಹೆಚ್.ಐ. ವಿ. ಯಾವುದೇ ಸ್ಥಿತಿಯಿಂದಾಗಿ ರೋಗ ನಿರೋಧಕ ನಿಗ್ರಹದ ರೋಗಿಗಳು ಲಸಿಕೆಯನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು.
ಯಾರು ಲಸಿಕೆ ಪಡೆದುಕೊಳ್ಳಬಾರದು :
ಗರ್ಭಿಣಿಯರು ಮತ್ತು ಬಾಣಂತಿಯರು ಕೋವಿಡ್- ೧೯ ಲಸಿಕೆ ಪಡೆದುಕೊಳ್ಳಬಾರದು. ೧೮ ವರ್ಷಗಳಿಗಿಂತ ಕಡಿಮೆ ಇರುವ ವಯಸ್ಸಿನವರು ಲಸಿಕೆ ತೆಗೆದುಕೊಳ್ಳಬಾರದು.
ಲಸಿಕೆಯನ್ನು ಪಡೆಯುವ ಸ್ಥಳಗಳು:
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು.
ಲಸಿಕೆ ಪಡೆದುಕೊಳ್ಳಲು ಬೇಕಾಗಿರುವ ಅಗತ್ಯ ದಾಖಲೆಗಳು :
ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾಸ್ ಪೋರ್ಟ್, ವಾಹನ ಚಾಲನಾ ಪರವಾನಗಿ ಪತ್ರ
ಲಸಿಕೆ ಪಡೆಯಲು ನೊಂದಣಿ ವಿಧಾನ :
ಆನ್ ಲೈನ್ ನೋಂದಣಿ ಮತ್ತು ನೇರ ವಾಕ್ ಇನ್ ನೋಂದಣಿ ಲಭ್ಯವಿರುತ್ತದೆ.
