ಹಾಸನ ಏ.೨೧:- ಕೋವಿಡ್ ದಿನೇ ದಿನೇ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ತಹಸೀಲ್ದಾರ್‌ಗಳು, ಕಾರ್ಯಾನಿರ್ವಾಹಕರು, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಕಲ್ಯಾಣ ಮಂಟಪಗಳಲ್ಲಿ ಕೇವಲ ೫೦ ಜನರನ್ನು ಮಾತ್ರ ನಿಗಧಿಗೊಳಿಸಿದ್ದು ಮದುವೆಗೆ ಆಗಮಿಸುವವರು ತಹಸೀಲ್ದಾರ್ ಮುಖಾಂತರ ಪಾಸ್‌ಗಳನ್ನು ತರುವುದು ಕಡ್ಡಾಯವಾಗಿದ್ದು ೫೦ ಜನರಿಗಿಂತ ಹೆಚ್ಚು ಜನ ಸೇರಿದರೆ ಛತ್ರದ ಮಾಲೀಕರ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕೋವಿಡ್-೧೯ ವಿಷಯ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳ್ಳಿಗೆ ೬ ಘಂಟೆಯವರಿಗೆ ಕರ್ಫ್ಯೂ ಜಾರಿಯಲ್ಲಿದ್ದು ಸಾರ್ವಜನಿಕರು ಅನವಶ್ಯಕವಾಗಿ ಓಡಾಡದಂತೆ ಎಚ್ಚರವಹಿಸಿ ಜೊತೆಗೆ ಜಿಮ್, ಚಿತ್ರ ಮಂದಿರ, ದೇವಸ್ಥಾನಗಳು, ಪಾರ್ಕ್, ಯೋಗ ತರಬೇತಿ ಶಾಲೆಗಳು, ಶಾಲಾ-ಕಾಲೇಜುಗಳನ್ನು ನೀಷೇದಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಮತ್ತು ಅವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು ರಾಷ್ಟಿçÃಯ ಹೆದ್ದಾರಿಗಳಲ್ಲಿರುವ ವರ್ಕ್ಶಾಪ್‌ಗಳನ್ನು ಹೊರತು ಪಡಿಸಿ ಇನ್ನೂಳಿದ ಎಲ್ಲಾ ವರ್ಕ್ಶಾಪ್ ಗಳನ್ನು ಮುಚ್ಚಿಸಲು ಆದೇಶಿಸಿದರು.
ಹೊಳೆನರಸೀಪುರದ ತಾಲ್ಲೂಕು ಕಚೇರಿಯಿಂದ ವಿಡಿಯೋ ಸಂವಾದ ಮೂಲಕ ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ ಅವರು ೪೫ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಕೋವಿಡ್ ಸೋಂಕಿನಿAದ ಬಳಲುತ್ತಿರುವವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಎಂದರಲ್ಲದೆ ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯ ಚುರುಕುಗೊಳಿಸಿ ಆರ್. ಟಿ. ಪಿ.ಸಿ.ಆರ್. ಪರೀಕ್ಷೆ ಹೆಚ್ಚಿಸುವಂತೆ ÀÆಚಿಸಿದರು.
ಖಾಸಗಿ ವಾಹನಗಳಲ್ಲಿ ಅಗತ್ಯಕಿಂತ ಹೆಚ್ಚೂ ಜನರನ್ನು ಸಾಗಿಸತ್ತಿರುವುದು ಕಂಡುಬAದಿದ್ದು ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ರೇವಣ್ಣ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಾರ್ವಜನಿಕರು ದಿನ ನಿತ್ಯ ವಸ್ತುಗಳನ್ನು ಸಾಗಾಟ ಮಾಡುವ ವೇಳೆಯಲ್ಲಿ ಸ್ಯಾನಿಟೈಸರ್ ಉಪಯೋಗಿಸಿ ಎಚ್ಚರದಿಂದ ಸಾಗಿಸುವಂತೆ ಸೂಚಿಸಿದರು.
ಮೆಡಿಕಲ್ ಶಾಪ್‌ಗಳಲ್ಲಿ ಔಷಧಿಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಅಂತವರ ವಿರುದ್ಧ ಕ್ರಮ ಜರುಗಿಸಿ ಎಂದರಲ್ಲದೆ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸಾ ವೆಚ್ಚದ ಬೋರ್ಡ್ ಹಾಕುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಬಿ. ಎ ಪರಮೇಶ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಬಿ ಎ ಜಗದೀಶ್, ಗಿರೀಶ್ ನಂದನ್, ನಗರ ಸಭೆ ಆಯುಕ್ತರಾದ ಕೃಷ್ಣಮೂರ್ತಿ, ಎಲ್ಲಾ ತಾಲ್ಲೂಕು ತಹಸೀಲ್ದಾರ್‌ಗಳು ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.
